ತ್ರಿಪುರಾದ ಗಿರಿಜನರು ಆಹಾರಕ್ಕಾಗಿ ಬಾಂಗ್ಲಾದೇಶಕ್ಕೆ ನುಸುಳುತ್ತಿದ್ದಾರೆ:ಸಿಪಿಎಂ

Update: 2018-06-03 14:11 GMT
ಸಾಂದರ್ಭಿಕ ಚಿತ್ರ

ಅಗರ್ತಲಾ,ಜೂ.3: ತ್ರಿಪುರಾದ ಬುಡಕಟ್ಟು ಪ್ರದೇಶಗಳ ಜನರು ಆಹಾರ ಸಂಗ್ರಹಿಸಲು ಗಡಿ ದಾಟಿ ಬಾಂಗ್ಲಾದೇಶವನ್ನು ಪ್ರವೇಶಿಸುತ್ತಿದ್ದಾರೆ ಮತ್ತು ಸಂಜೆ ವಾಪಸಾಗುತ್ತಿದ್ದಾರೆ ಎಂದು ಹೇಳಿರುವ ಪ್ರತಿಪಕ್ಷ ಸಿಪಿಎಂ,ಈ ಪ್ರದೇಶಗಳನ್ನು ಸಂಕಷ್ಟಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿದೆ.

ತಾನು ಹಲವಾರು ಪ್ರದೇಶಗಳಿಗೆ,ಮುಖ್ಯವಾಗಿ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಧಲಾಯಿ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಅವರು ತಮ್ಮ ಜೀವನೋಪಾಯಕ್ಕಾಗಿ ಭಾರತ-ಬಾಂಗ್ಲಾ ಗಡಿಯನ್ನು ದಾಟುತ್ತಿದ್ದಾರೆ. ಹಸಿವು ಅವರಿಗೆ ಇದನ್ನು ಅನಿವಾರ್ಯವಾಗಿಸಿದೆ. ಇದು ನಾಚಿಕೆಗೇಡಿನ ವಿಷಯವಾಗಿದೆ ಎಂದು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ ಸಿಪಿಎಂ ಸಂಸದ ಜಿತೇನ್ ಚೌಧುರಿ ಅವರು,300ರಿಂದ 400ರಷ್ಟು ಜನರು ಪ್ರತಿದಿನ ಗಡಿಯನ್ನು ದಾಟುತ್ತಾರೆ ಮತ್ತು ಔಷಧೀಯ ಸಸ್ಯಗಳು ಸೇರಿದಂತೆ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿಕೊಂಡು ಸಂಜೆ ತಮ್ಮ ಮನೆಗಳಿಗೆ ಮರಳುತ್ತಾರೆ ಎಂದರು. ಬಿಜೆಪಿ-ಐಪಿಎಫ್‌ಟಿ ಸರಕಾರವು ಈ ಪ್ರದೇಶಗಳನ್ನು ಸಂಕಷ್ಟಪೀಡಿತ ಎಂದು ಘೋಷಿಸಬೇಕು ಮತ್ತು ತಕ್ಷಣ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಕ್ಷದ ಬುಡಕಟ್ಟು ವಿಭಾಗ ಗಣ ಮುಕ್ತಿ ಪರಿಷದ್‌ನ ಅಧ್ಯಕ್ಷರೂ ಆಗಿರುವ ಚೌಧುರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News