‘ಕಾಲಾ’ಗಾಗಿ ಎಲ್ಲರೂ ಕಾಯುತ್ತಿದ್ದಾರೆ, ಚಿತ್ರ ಬಿಡುಗಡೆ ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್

Update: 2018-06-06 14:44 GMT

ಹೊಸದಿಲ್ಲಿ, ಜೂ. 6: ಜೂನ್ 7ರಂದು ತೆರೆ ಕಾಣಲಿರುವ ರಜನಿಕಾಂತ್ ನಟನೆಯ ‘ಕಾಲಾ’ ಬಿಡುಗಡೆಗೆ ನಿಷೇಧ ಹೇರಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಕಾಲಾ ಚಲನಚಿತ್ರ ಬಿಡುಗಡೆ ವಿರುದ್ಧ ತಡೆಯಾಜ್ಞೆ ಕೋರಿ ಕೆ.ಎಸ್. ರಾಜಶೇಖರನ್ ಸಲ್ಲಿಸಿದ್ದ ಮನವಿ ಸ್ವೀಕರಿಸಲು ನ್ಯಾಯಮೂರ್ತಿ ಎ.ಕೆ. ಗೋಯಲ್ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ರಜಾ ಕಾಲದ ಪೀಠ ನಿರಾಕರಿಸಿದೆ.

 ‘‘ಚಿತ್ರ ಬಿಡುಗಡೆ ಮಾಡುವುದಕ್ಕೆ ನೀವು ತಡೆಯಾಜ್ಞೆ ಕೋರಲು ಬಯಸುತ್ತಿದ್ದೀರಿ. ಆದರೆ, ಪ್ರತಿಯೊಬ್ಬರು ಚಿತ್ರ ಬಿಡುಗಡೆಯಾಗಲು ಕಾಯುತ್ತಿದ್ದಾರೆ.’’ ಎಂದು ಪೀಠ ದೂರುದಾರರ ಪರವಾಗಿ ಹಾಜರಾದ ವಕೀಲರಿಗೆ ತಿಳಿಸಿತು. ಚಿತ್ರದ ಶೀರ್ಷಿಕೆ ಹಾಗೂ ಕತೆ ನನ್ನದು. ಇದನ್ನು ಬಳಸಿಕೊಳ್ಳಲು ಅವರು ನನ್ನ ಅನುಮತಿ ಪಡೆದಿಲ್ಲ ಎಂದು ರಾಜಶೇಖರನ್ ಪ್ರತಿಪಾದಿಸಿದ್ದಾರೆ. ದೂರುದುರಾರು ಮೂಲ ಕೃತಿಕಾರರಾಗಿದ್ದರೆ ಅವರು ತನಗಾದ ನಷ್ಟಕ್ಕೆ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

 ಚಲನಚಿತ್ರ ಬಿಡುಗಡೆ ವಿರುದ್ಧದ ಮನವಿ ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿದ ಮದ್ರಾಸ್ ಉಚ್ಚ ನ್ಯಾಯಾಲಯದ ಮೇ 16ರ ಆದೇಶವನ್ನು ಪ್ರಶ್ನಿಸಿ ದೂರುದಾರರು ಸುಪ್ರೀಂ ಕೋರ್ಟ್ ಸಂಪರ್ಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News