ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್: ನಟ ನವಾಝುದ್ದೀನ್ ಸಿದ್ದೀಕಿ ಸಹೋದರನ ವಿರುದ್ಧ ಪ್ರಕರಣ ದಾಖಲು

Update: 2018-06-11 14:59 GMT

ಮೀರತ್, ಜೂ. 11: ಫೇಸ್‌ಬುಕ್‌ನಲ್ಲಿ ಶಿವನ ಆಕ್ಷೇಪಾರ್ಹ ಚಿತ್ರವನ್ನು ಪೋಸ್ಟ್ ಮಾಡಿದ ನಟ ನವಾಝುದ್ದೀನ್ ಸಿದ್ದಿಕಿ ಅವರ ಹಿರಿಯ ಸಹೋದರ ಅಯಾಝುದ್ದೀನ್ ಸಿದ್ದಿಕಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.

ಅಯಾಝುದ್ದೀನ್ ಸಿದ್ದಿಕಿ ವಿರುದ್ಧ ಬುಧಾನಾದ ಬಿಜೆಪಿ ಯುವ ಮೋರ್ಚಾದ ಭರತ್ ಕುಮಾರ್ ರವಿವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಿದ್ದಿಕಿ ಅವರು ತನ್ನ ಫೇಸ್‌ಬುಕ್ ಖಾತೆಯಿಂದ ಶಿವನ ಆಕ್ಷೇಪಾರ್ಹ ಚಿತ್ರ ಪೋಸ್ಟ್ ಮಾಡಿದ್ದರು. ಈ ಹಿಂದೆ ಕೂಡ ಆವರು ಗೃಹ ಸಚಿವ ರಾಜನಾಥ್ ಸಿಂಗ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಯಾಝುದ್ದೀನ್, ‘‘ಫೇಸ್‌ಬುಕ್‌ನಲ್ಲಿ ಶನಿವಾರ ಸಂಜೆ ಈ ಆಕ್ಷೇಪಾರ್ಹ ಪೋಸ್ಟ್ ಅನ್ನು ನಾನು ನೋಡಿದೆ. ಇದು ನನ್ನ ಮನಸ್ಸನ್ನು ಕಲಕಿತು. ಆದುದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಇಂತಹ ಆಕ್ಷೇಪಾರ್ಹ ಚಿತ್ರಗಳನ್ನು ಪೋಸ್ಟ್ ಮಾಡಬೇಡಿ ಎಂದು ಸಂಬಂಧಿತ ವ್ಯಕ್ತಿಗೆ ಎಚ್ಚರಿಕೆ ನೀಡಿ ಪ್ರಮಾದವಶಾತ್ ಈ ಪೋಸ್ಟ್ ಮಾಡಿದೆ ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News