ವಿಪಕ್ಷಗಳಿಲ್ಲದೆ ಪ್ರಜಾಪ್ರಭುತ್ವ ಸಾಧ್ಯವಿಲ್ಲ: ಅಮಿತ್ ಶಾ

Update: 2018-06-11 16:21 GMT

ಹೊಸದಿಲ್ಲಿ, ಜೂ.11: ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಪ್ರಮುಖ ಪಾತ್ರ ವಹಿಸುತ್ತಿದ್ದು, ದೇಶವನ್ನು ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತಗೊಳಿಸುವುದು ಬಿಜೆಪಿಯ ‘ಕಾಂಗ್ರೆಸ್ ಮುಕ್ತ ಭಾರತ’ದ ಅರ್ಥವಾಗಿದೆ ಎಂದಿದ್ದಾರೆ.

“ಕಾಂಗ್ರೆಸ್ ಮುಕ್ತ ಭಾರತವೆಂದರೆ ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತಗೊಳ್ಳುವುದು. ವಿಪಕ್ಷಗಳಿಲ್ಲದೆ ಪ್ರಜಾಪ್ರಭುತ್ವ ಸಾಧ್ಯವಿಲ್ಲ. ದೇಶದಲ್ಲಿ ಕಾಂಗ್ರೆಸ್ ಪ್ರಭಾವ ಕುಸಿಯುತ್ತಿರುವುದು ಬೇರೆಯದೇ ವಿಷಯವಾಗಿದೆ” ಎಂದವರು ಹೇಳಿದರು.

“ಕಾಂಗ್ರೆಸನ್ನು ಉಳಿಸುವುದು ರಾಹುಲ್ ಗಾಂಧಿಯ ಕೆಲಸವೇ ಹೊರತು, ನನ್ನದಲ್ಲ” ಎಂದವರು ಇದೇ ಸಂದರ್ಭ ಹೇಳಿದರು.

ತನ್ನ ಭಾಷಣಗಳಲ್ಲಿ ರಾಹುಲ್ ವಿರುದ್ಧದ ವಾಗ್ದಾಳಿಯ ಬಗ್ಗೆ ಮಾತನಾಡಿದ ಅಮಿತ್ ಶಾ, “ಇದನ್ನು ವೈಯಕ್ತಿಕ ದಾಳಿ ಎಂದು ಪರಿಗಣಿಸಬೇಕಾಗಿಲ್ಲ ಎಂದು ಹೇಳಿದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News