ಆಧಾರ್ ದೃಢೀಕರಣಕ್ಕೆ ಮುಖದ ಚಹರೆ ಬಳಕೆ: ಆ.1ಕ್ಕೆ ಮುಂದೂಡಿದ ಯುಐಡಿಎಐ

Update: 2018-06-13 14:52 GMT

ಹೊಸದಿಲ್ಲಿ,ಜೂ.13: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಆಧಾರ್ ದೃಢೀಕರಣಕ್ಕೆ ಮುಖದ ಚಹರೆಯನ್ನು ಬಳಸಿಕೊಳ್ಳುವ ತನ್ನ ನಿರ್ಧಾರದ ಜಾರಿಯನ್ನು ಈ ಹಿಂದೆ ನಿಗದಿಗೊಳಿಸಿದ್ದ ಜು.1ರಿಂದ ಆ.1ಕ್ಕೆ ಮುಂದೂಡಿದೆ.

ಆಧಾರ್ ದೃಢೀಕರಣಕ್ಕಾಗಿ ಹಾಲಿ ಬಳಸಲಾಗುತ್ತಿರುವ ಕೈಬೆರಳುಗಳ ಗುರುತು ಮತ್ತು ಅಕ್ಷಿಪಟಲದ ಸ್ಕಾನಿಂಗ್ ಕುರಿತು ಹಲವಾರು ದೂರುಗಳು ಬಂದಿರುವುದು ಆಧಾರ್ ದೃಢೀಕರಣಕ್ಕೆ ಮುಖಚಹರೆಯ ಬಳಕೆಯನ್ನು ಅಗತ್ಯವಾಗಿಸಿದೆ. ಆದರೆ ಮುಖ ಚಹರೆಯೊಂದಿಗೆ ಬೆರಳಚ್ಚು,ಅಕ್ಷಿಪಟಲದ ಸ್ಕ್ಯಾನ್ ಅಥವಾ ಒಂದು ಬಾರಿಯ ಪಾಸ್‌ವರ್ಡ್(ಒಟಿಪಿ)ನ್ನೂ ಬಳಸಲಾಗುವುದು ಎಂದು ಯುಐಡಿಎಐ ತಿಳಿಸಿದೆ.

 ಪ್ರಮಾಣೀಕೃತ ನೋಂದಾಯಿತ ಸಾಧನಗಳಲ್ಲಿ ಮುಖ ಚಹರೆಯನ್ನು ಸೇರಿಸಲು ಬಯೋಮೆಟ್ರಿಕ್ ಸಾಧನಗಳ ಪೂರೈಕೆದಾರರೊಂದಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಅದು,ಮುಖಚಹರೆಯನ್ನು ದೃಢಪಡಿಸಿಕೊಳ್ಳಲು ಪ್ರತ್ಯೇಕ ನೋಂದಾಯಿತ ಸಾಧನವನ್ನು ತಾನು ಒದಗಿಸಬಹುದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News