‘ಝೀರೋ’ ಟೀಸರ್ ಬಿಡುಗಡೆ: ಶಾರೂಖ್ ಖಾನ್ ಚಿತ್ರದಲ್ಲಿ ಸಲ್ಮಾನ್ ಕಮಾಲ್ !

Update: 2018-06-14 09:10 GMT

ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅಭಿನಯದ ‘ಝೀರೋ’ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ಅಭಿಮಾನಿಗಳಿಗೆ ಅನಿರೀಕ್ಷಿತ ಅಚ್ಚರಿ ನೀಡಿದೆ. ಇತ್ತೀಚೆಗಷ್ಟೇ ಝೀರೋ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಶಾರೂಖ್ ಖಾನ್ ಈ ಚಿತ್ರದಲ್ಲಿ ಕುಳ್ಳ ವ್ಯಕ್ತಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇಂದು ‘ಝೀರೋ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ಶಾರೂಖ್-ಸಲ್ಮಾನ್ ಜುಗಲ್ಬಂದಿಯಿಂದ ಅಭಿಮಾನಿಗಳು ಅಚ್ಚರಿಗೊಂಡಿದ್ದು, ಟೀಸರ್ ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರ ಡಿಸೆಂಬರ್ 21ರಂದು ತೆರೆ ಕಾಣಲಿದೆ.

ಈ ಚಿತ್ರದಲ್ಲಿ ಶಾರೂಖ್ ಜೊತೆಗೆ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಮುಖ್ಯಭೂಮಿಕೆಯಲ್ಲಿ, ಅತಿಥಿ ಪಾತ್ರದಲ್ಲಿ ಶ್ರೀದೇವಿ, ರಾಣಿ ಮುಖರ್ಜಿ, ಕಾಜೊಲ್, ಕರೀಷ್ಮಾ ಕಪೂರ್ ಹಾಗು ಆಲಿಯಾ ಭಟ್ ನಟಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News