×
Ad

ವೈದ್ಯನನ್ನು ಮರಕ್ಕೆ ಕಟ್ಟಿಹಾಕಿ ಪತ್ನಿ- ಪುತ್ರಿಯ ಗ್ಯಾಂಗ್‌ರೇಪ್

Update: 2018-06-15 10:39 IST

 ಪಾಟ್ನಾ, ಜೂ.15: ವೈದ್ಯರೊಬ್ಬರನ್ನು ಮರಕ್ಕೆ ಕಟ್ಟಿಹಾಕಿ ಅವರ ಕಣ್ಣೆದುರೇ ಪತ್ನಿ ಹಾಗೂ 15 ವರ್ಷದ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ಗಯಾ ಜಿಲ್ಲೆಯಲ್ಲಿ ನಡೆದಿದೆ.

ಸುಮಾರು 20 ಮಂದಿ ಶಸ್ತ್ರಸಜ್ಜಿತ ಯುವಕರ ತಂಡ ಈ ಕೃತ್ಯ ಎಸಗಿದೆ. ಪತ್ನಿ ಹಾಗೂ ಪುತ್ರಿ ಜತೆ ಬೈಕ್‌ನಲ್ಲಿ ತೆರಳುತ್ತಿದ್ದ ವೈದ್ಯರನ್ನು ಸೋನ್‌ದಿಹಾ ಗ್ರಾಮದ ಬಳಿ ನಿಲ್ಲಿಸಿ ಮರಕ್ಕೆ ಕಟ್ಟಿದ ದುಷ್ಕರ್ಮಿಗಳು ಬಳಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಪಕ್ಕದ ಹೊಲದಲ್ಲಿ ಅವರ ಪತ್ನಿ ಹಾಗೂ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಹಿರಿಯ ಪೊಲೀಸ್ ಅಧೀಕ್ಷಕ ರಾಜೀವ್ ಮಿಶ್ರಾ ಹೇಳಿದ್ದಾರೆ.

ಘಟನೆ ನಡೆದ ಎರಡೇ ಗಂಟೆಗಳಲ್ಲಿ ಎಲ್ಲ 20 ಮಂದಿಯನ್ನೂ ಕೋಂಚ್ ಪೊಲೀಸರು ಬಂಧಿಸಿದ್ದಾರೆ.ಸಂತ್ರಸ್ತರು ಇಬ್ಬರು ಆರೋಪಿಗಳನ್ನು ಗುರುತಿಸಿದ್ದು, ಇತರರು ಕೃತ್ಯ ಎಸಗುವ ವೇಳೆ ಮುಖಮುಚ್ಚಿಕೊಂಡಿದ್ದರು. ಸ್ಥಳದಿಂದ ಹೊರಡುವ ಮುನ್ನ ಅತ್ಯಾಚಾರಿಗಳು ವೈದ್ಯರನ್ನು ಬಿಚ್ಚಿ, ಪೊಲೀಸರಿಗೆ ವಿಷಯ ತಿಳಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ಪರಾರಿಯಾಗಿದ್ದಾರೆ.

ಆದಾಗ್ಯೂ ತಮ್ಮ ಮೊಬೈಲ್‌ನಿಂದ ಪೊಲೀಸರಿಗೆ ಕರೆ ಮಾಡಿ ಘಟನೆಯನ್ನು ವೈದ್ಯ ವಿವರಿಸಿದರು. ತಕ್ಷಣ ವಿಶೇಷ ಎಸ್ಪಿಹಾಗೂ ಎಸ್‌ಡಿಪಿಓ ಮನೀಶ್ ಕುಮಾರ್ ಸ್ಥಳಕ್ಕೆ ಧಾವಿಸಿ, ಸಂತ್ರಸ್ತರನ್ನು ವೈದ್ಯಕೀಯ ತಪಾಸಣೆಗಾಗಿ ಅನುರಾಜ್ ನಾರಾಯಣ್ ಮಗದ್ ವೈದ್ಯಕೀಯ ಕಾಲೇಜಿಗೆ ಕಳುಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News