ಏಕೈಕ ಟೆಸ್ಟ್: ಅಫ್ಘಾನಿಸ್ತಾನ 109 ರನ್‌ಗೆ ಆಲೌಟ್

Update: 2018-06-15 09:06 GMT

ಬೆಂಗಳೂರು, ಜೂ.15: ಭಾರತ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಕೇವಲ 109 ರನ್‌ಗೆ ಆಲೌಟಾಗಿದೆ. ಫಾಲೋ-ಆನ್ ಭೀತಿ ಎದುರಿಸುತ್ತಿದೆ.

ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಅಫ್ಘಾನ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಿರುವ ಭಾರತ ಮೊದಲ ಇನಿಂಗ್ಸ್‌ನಲ್ಲಿ 365 ರನ್ ಮುನ್ನಡೆ ಪಡೆದುಕೊಂಡಿದೆ.

 ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡನೇ ದಿನದಾಟವಾದ ಶುಕ್ರವಾರ 6 ವಿಕೆಟ್ ನಷ್ಟಕ್ಕೆ 347 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ 474 ರನ್ ಗಳಿಸಿ ಆಲೌಟಾಗಿದೆ.

ಭಾರತದ ಬೃಹತ್ ಮೊತ್ತಕ್ಕೆ ಉತ್ತರಿಸಹೊರಟ ಅಫ್ಘಾನಿಸ್ತಾನಕ್ಕೆ ಸ್ಪಿನ್ನರ್ ಆರ್.ಅಶ್ವಿನ್(4-27) ನೇತೃತ್ವದ ಬೌಲಿಂಗ್ ಪಡೆ ದುಸ್ವಪ್ನವಾಗಿ ಕಾಡಿದೆ. ಅಶ್ವಿನ್‌ಗೆ ರವೀಂದ್ರ ಜಡೇಜ(2-18) ಹಾಗೂ ಇಶಾಂತ್ ಶರ್ಮ(2-28) ತಲಾ ವಿಕೆಟ್ ಕಬಳಿಸುವುದರೊಂದಿಗೆ ಸಾಥ್ ನೀಡಿದ್ದಾರೆ.

ಅಫ್ಘಾನಿಸ್ತಾನದ ಪರ ಮುಹಮ್ಮದ್ ನಬಿ(24) ಅಗ್ರ ಸ್ಕೋರರ್ ಎನಿಸಿಕೊಂಡರು. ಮುಜೀಬ್‌ವುರ್‌ರಹ್ಮಾನ್(15) ಹಾಗೂ ಶಹಝಾದ್(14) ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News