ಬುಖಾರಿ ಹತ್ಯೆಗೂ ಕಾಶ್ಮೀರ ಕುರಿತ ವಿಶ್ವಸಂಸ್ಥೆಯ ವರದಿಗೂ ನಂಟು ಕಲ್ಪಿಸಿದ ಪಾಕಿಸ್ತಾನ

Update: 2018-06-15 09:39 GMT

ಹೊಸದಿಲ್ಲಿ,ಜೂ.15: ಪಾಕಿಸ್ತಾನದ ವಿದೇಶಾಂಗ ಕಚೇರಿಯು ಗುರುವಾರ ಬಿಡುಗಡೆಗೊಂಡಿದ್ದ ಜಮ್ಮು-ಕಾಶ್ಮೀರ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವರದಿಯ ಕುರಿತು ಹಿರಿಯ ಕಾಶ್ಮೀರಿ ಪತ್ರಕರ್ತ ಶುಜಾತ್ ಬುಖಾರಿಯವರು ಮಾಡಿದ್ದ ಟ್ವೀಟ್‌ಗೂ ಅವರ ಹತ್ಯೆಗೂ ಸಂಬಂಧ ಕಲ್ಪಿಸಿದೆ.

ವಿಶ್ವಸಂಸ್ಥೆಯ ವರದಿಯ ಕುರಿತು ಟ್ವೀಟ್ ಮಾಡಿದ ಗಂಟೆಗಳಲ್ಲೇ ಬುಖಾರಿಯವರ ಹತ್ಯೆ ನಡೆದಿರುವದು‘ಭಯಂಕರ ಕಾಕತಾಳೀಯ’ ಎಂದು ಅದು ಬಣ್ಣಿಸಿದೆ. ಕಾಶ್ಮೀರದ ಉಭಯ ಭಾಗಗಳಲ್ಲಿ ಪಾಕಿಸ್ತಾನ ಮತ್ತು ಭಾರತದ ಸಶಸ್ತ್ರ ಪಡೆಗಳು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಮಾಡಿವೆ ಎಂದು ವಿಶ್ವಸಂಸ್ಥೆಯ ವರದಿಯು ಆರೋಪಿಸಿದ್ದು,ಭಾರತವು ಈಗಾಗಲೇ ಈ ವರದಿಯನ್ನು ತಿರಸ್ಕರಿಸಿದೆ.

ಈ ಸಂಬಂಧ ಟ್ವೀಟಿಸಿರುವ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಸಲ್ ಅವರು,ಈ ಹತ್ಯೆ ಗಂಭೀರ ಪ್ರಶ್ನೆಗಳನ್ನೆತ್ತಿದೆ. ಭಾರತವು ಈಬಗ್ಗೆ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಬೇಕು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News