ಒಂದೇ ದಿನ ಎರಡು ಬಾರಿ ಮೃತಪಟ್ಟ ಪಶ್ಚಿಮ ಬಂಗಾಳದ ಮಹಿಳೆ !

Update: 2018-06-16 11:34 GMT
ಸಾಂದರ್ಭಿಕ ಚಿತ್ರ

ಕೊಲ್ಕತ್ತಾ,ಜೂ.16 : ಐವತ್ತೈದು ವರ್ಷದ ಮಹಿಳೆಯೊಬ್ಬರು ಒಂದೇ ದಿನ ಎರಡು ಬಾರಿ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಸಿಬಾನಿ ಬಿಸ್ವಾಸ್ ಎಂಬ ಮಹಿಳೆಯನ್ನು ಮೊದಲು ಆಸ್ಪತ್ರೆಯೊಂದು ಮೃತ ಎಂದು ಘೋಷಿಸಿತ್ತು. ಆದರೆ ಆಕೆಯ ಚಿತೆಯ ಮೇಲೆ ಮಲಗಿಸಲಾದ  ದೇಹ ಉಸಿರಾಡುತ್ತಿದೆಯೆಂದು ತಿಳಿದೊಡನೆ ಮತ್ತೆ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಮಧ್ಯಂಗ್ರಾಮ್ ಎಂಬಲ್ಲಿನ ನಿವಾಸಿಯಾಗಿದ್ದ ಮಹಿಳೆ ಸೆಪ್ಸಿಸ್ ಕಾಯಿಲೆಯಿಂದ ಬಳಲುತ್ತಿದ್ದುದರಿಂದ ಆರಂಭದಲ್ಲಿ ಆಕೆಯನ್ನು ಸರಕಾರಿ ಆರ್‍ಜಿ ಖರ್ ಆಸ್ಪತ್ರೆಗೆ ಜೂನ್ 11ರಂದು ದಾಖಲಿಸಲಾಗಿತ್ತು. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನಂತರ ಸಾವನ್ನಪ್ಪಿದ್ದಾರೆಂದು ಘೋಷಿಸಿ ಮರಣ ಪ್ರಮಾಣ ಪತ್ರವನ್ನೂ ನೀಡಿದ ಆಸ್ಪತ್ರೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿತ್ತು. ಆಕೆಯ ಕಳೇಬರವನ್ನು ಕಾಶಿಪುರಕ್ಕೆ ಅಂತಿಮಸಂಸ್ಕಾರಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ಚಿತೆಯ ಮೇಲೆ ಮಲಗಿಸಲಾಗಿದ್ದ ದೇಹ ಉಸಿರಾಡುತ್ತಿದ್ದುದನ್ನು ಗಮಿನಿಸಿ ಮಾಧ್ಯಂಗ್ರಾಮಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿತ್ತು. ಆಧರೆ ಅಲ್ಲಿಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಸರಕಾರಿ ಆರ್ ಜಿ ಖರ್ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News