ವಿಶ್ವಕಪ್‌ನಲ್ಲೂ ಬಾರ್ಸಿಲೋನಾದ ವಿಶಿಷ್ಟ ದಾಖಲೆ !

Update: 2018-06-22 10:43 GMT

  ಮಾಸ್ಕೋ, ಜೂ.17: ರಶ್ಯದಲ್ಲಿ ನಡೆಯುತ್ತಿರುವ 21ನೇ ಆವೃತ್ತಿಯ ಫಿಫಾ ವಿಶ್ವಕಪ್ ನಲ್ಲಿ ಪ್ರತಿಯೊಂದು ಗ್ರೂಪ್‌ನ ಒಂದು ತಂಡದಲ್ಲಿ ಎಫ್‌ಸಿ ಬಾರ್ಸಿಲೋನಾ ತಂಡದ ಕನಿಷ್ಠ ಒಬ್ಬ ಆಟಗಾರ ಅವಕಾಶ ಗಿಟ್ಟಿಸಿಕೊಂಡಿದ್ದಾನೆ. ಇದರೊಂದಿಗೆ ಎಫ್‌ಸಿ ಬಾರ್ಸಿಲೋನಾ ಹೊಸ ದಾಖಲೆ ಬರೆದಿದೆ.
ಜೂ.14ರಿಂದ ಆರಂಭಗೊಂಡಿರುವ ಫುಟ್ಬಾಲ್ ವಿಶ್ವಕಪ್‌ನ ಗ್ರೂಪ್ ಹಂತದ ಸ್ಪರ್ಧೆಯಲ್ಲಿ 8 ಗ್ರೂಪ್‌ಗಳಲ್ಲಿ 32 ತಂಡಗಳು ಮುಂದಿನ ಹಂತಕ್ಕೇರಲು ಹಣಾಹಣಿ ನಡೆಸುತ್ತಿದೆ.
 ಪ್ರತಿಯೊಂದು ಗ್ರೂಪ್‌ಗಳಲ್ಲಿ 4 ತಂಡಗಳು ಸ್ಥಾನ ಪಡೆದಿದೆ. ಆತಿಥ್ಯ ವಹಿಸಿಕೊಂಡಿರುವ ರಶ್ಯ ಎ’ ಗುಂಪಿನಲ್ಲಿ ಮತ್ತು ಹಾಲಿ ಚಾಂಪಿಯನ್ ಜರ್ಮನಿ ಎಫ್’ ಗುಂಪಿನಲ್ಲಿ ಅವಕಾಶ ಪಡೆದಿದೆ.
ವಿವಿಧ ಗ್ರೂಪ್ ತಂಡಗಳಲ್ಲಿ ಅವಕಾಶ ಪಡೆದಿರುವ ಬಾರ್ಸಿಲೋನಾ ತಂಡದ ಆಟಗಾರರ ಆಟಗಾರರ ವಿವರ ಇಂತಿವೆ.
ಗ್ರೂಪ್ -ಎ: ಲೂಯಿಸ್ ಸುಯರೆಝ್(ಉರುಗ್ವೆ).
ಗ್ರೂಪ್-ಬಿ: ಆ್ಯಂಡ್ರೆಸ್ ಇನಿಯೆಸ್ತ , ಸೆರ್ಗಿಯೋ ಬಸ್‌ಕ್ಯುಟ್ಸ್, ಗೆರಾರ್ಡ್ ಪಿಕ್ಯು ಮತ್ತು ಜೊರ್ಡಿ ಅಲ್ಬಾ(ಸ್ಪೇನ್).
 ಗ್ರೂಪ್-ಸಿ: ಸ್ಯಾಮುಯೆಲ್ ಉಮಿಟಿ ಮತ್ತು ಡೆಂಬೆಲೆ(ಫ್ರಾನ್ಸ್).
ಗ್ರೂಪ್-ಡಿ: ಲಿಯೊನೆಲ್ ಮೆಸ್ಸಿ(ಅರ್ಜೆಂಟೀನ) ಮತ್ತು ಐವಾನ್ ರಾಕಿಟಿಕ್(ಕ್ರೊವೇಶಿಯಾ).
ಗ್ರೂಪ್ ಇ: ಫಿಲಿಪ್ ಕುಟಿನ್ಹೊ ಮತ್ತು ಪೌಲಿನೊ (ಬ್ರೆಝಿಲ್)
ಗ್ರೂಪ್ ಎಫ್:ಮಾರ್ಕ್ ಆ್ಯಂಡ್ರೆ ಟೆರ್ ಸ್ಟೆಗೆನ್(ಜರ್ಮನಿ)
ಗ್ರೂಪ್ ಜಿ: ಥಾಮಸ್ ವೆರ್ಮಲಿನ್(ಬೆಲ್ಜಿಯಂ)
ಗ್ರೂಪ್ ಎಚ್: ಯೆರ್ರಿ ಮಿನಾ(ಕೊಲಂಬಿಯಾ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News