ಔರಂಗಜೇಬ್ ಬಲಿದಾನಕ್ಕೆ ಪ್ರತಿಯಾಗಿ ನೂರು ಉಗ್ರರ ಹತ್ಯೆಯಾಗಬೇಕು ಎಂದ ಸಹೋದರ

Update: 2018-06-18 13:10 GMT

ಹೊಸದಿಲ್ಲಿ, ಜೂ.18:  ಕಾಶ್ಮೀರದ ಪುಲ್ವಾಮ ಎಂಬಲ್ಲಿನ ಗುಸ್ಸೂ ಪ್ರಾಂತ್ಯದಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ ನಂತರ ಹತ್ಯೆಗೀಡಾದ ಸೈನಿಕ ಔರಂಗಜೇಬ್ ಅಂತ್ಯಕ್ರಿಯೆ ನಡೆದ ಬೆನ್ನಲ್ಲೇ ಅವರ ಬಲಿದಾನಕ್ಕೆ ಪ್ರತಿಯಾಗಿ ನೂರು ಜನರನ್ನು ಸಾಯಿಸಬೇಕು ಎಂದು ಸಹೋದರ ಆಗ್ರಹಿಸಿದ್ದಾರೆ.

"ಹಮಾರೆ ಭಾಯಿ ಕೆ ಬದ್ಲೆ ಹಮೆ ಸೌ ಚಾಹಿಯೇ, ಅಗರ್ ನಹಿ ದೇ ಸಕ್ತೇ ತೋ ಬತಾ ದೋ, ಹಮ್ ಖುದ್ ಲೇಂಗೆ' (ನಿಮ್ಮಿಂದ ಸಾಧ್ಯವಿಲ್ಲವೆಂದಾದರೆ ಹೇಳಿ ನಾವೇ ಆ ಕಾರ್ಯ ಮಾಡುತ್ತೇವ) ಎಂದು ಔರಂಗಜೇಬ್ ಸಹೋದರ ಹೇಳಿದ್ದಾರೆ. ಘೋಷಿಸಿದ್ದಾನೆ.

ರವಿವಾರ ಪೂಂಚ್ ಗ್ರಾಮದಲ್ಲಿ ಔರಂಗಜೇಬ್ ಅಂತ್ಯ ಸಂಸ್ಕಾರ ನೂರಾರು ಜನರ ಸಮ್ಮುಖದಲ್ಲಿ ನಡೆದಿದೆ.ಜಮ್ಮು ಮತ್ತು ಕಾಶ್ಮೀರದಲ್ಲಿನ ಉಗ್ರರನ್ನು ನಿರ್ಮೂಲನೆಗೈಯ್ಯಬೇಕೆಂದು  ಔರಂಗಜೇಬ್ ತಂದೆ ಮುಹಮ್ಮದ್ ಹನೀಫ್ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News