ಬಲಪ್ರಯೋಗದ ಕ್ರಮವು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವುದಿಲ್ಲ: ಮೆಹಬೂಬ ಮುಫ್ತಿ

Update: 2018-06-19 14:38 GMT

ಶ್ರೀನಗರ, ಜೂ.19: ಮಂಗಳವಾರ ಪಿಡಿಪಿ ಜೊತೆ ಮಾಡಿಕೊಂಡಿದ್ದ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡ ನಂತರ ಪತ್ರಿಕಾಗೋಷ್ಟಿ ಕರೆದ ಪಿಡಿಪಿ ನಾಯಕಿ ಮೆಹಬೂಬ ಮುಫ್ತಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಲಪ್ರಯೋಗದ ಕ್ರಮಗಳು ಸಫಲವಾಗುವುದಿಲ್ಲ. ಇಲ್ಲಿ ಸಮನ್ವಯವೇ ಪ್ರಮುಖವಾದುದು ಎಂದು ತಿಳಿಸಿದ್ದಾರೆ.

ನಾನು ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡಿದ್ದೇನೆ. ನಮ್ಮ ಮತ್ತು ಬಿಜೆಪಿ ಮೈತ್ರಿಯು ಸೂಕ್ಷ್ಮವಾಗಿ ಯೋಜಿಸಲಾಗಿತ್ತು. ಕಾಶ್ಮೀರ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ನಾವು ಕೈಜೋಡಿಸಿದ್ದೆವು ಎಂದಾಕೆ ತಿಳಿಸಿದ್ದಾರೆ.

ನನಗೇನೂ ಆಘಾತವಾಗಿಲ್ಲ. ನಾವು ಅಧಿಕಾರಿಕ್ಕಾಗಿ ಈ ಮೈತ್ರಿಯನ್ನು ಮಾಡಿಲ್ಲ. ಈ ಮೈತ್ರಿಯು ಏಕಪಕ್ಷೀಯ ಕದನ ವಿರಾಮ, ಪ್ರಧಾನಿಯವರ ಪಾಕಿಸ್ತಾನ ಭೇಟಿ, 11,000 ಯುವಕರ ಮೇಲಿನ ಪ್ರಕರಣಗಳ ಹಿಂಪಡೆಯುವಿಕೆಯಂಥ ದೊಡ್ಡ ಉದ್ದೇಶಗಳನ್ನು ಹೊಂದಿತ್ತು ಎಂದು ಮೆಹಬೂಬ ಮುಫ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News