ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಟನೆ ಬಾರಿ ರಾಜ್ಯಪಾಲರ ಆಳ್ವಿಕೆ ಸಾಧ್ಯತೆ

Update: 2018-06-19 14:52 GMT
ಮೆಹಬೂಬ ಮುಫ್ತಿ

ಶ್ರೀನಗರ, ಜೂ.19: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಏಳು ಬಾರಿ ರಾಜ್ಯಪಾಲರ ಆಳ್ವಿಕೆಯನ್ನು ಹೇರಲಾಗಿದೆ. ಸದ್ಯ ಆಡಳಿತಾರೂಡ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಮಂಗಳವಾರ ಮುರಿಯುವ ಮೂಲಕ ಎಂಟನೇ ಬಾರಿ ಕಣಿವೆ ರಾಜ್ಯ ರಾಜ್ಯಪಾಲರ ಆಳ್ವಿಕೆಗೆ ಒಳಗಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿದೆ.

ಹೊಸ ಸರಕಾರ ರಚನೆಯಾಗುವ ಯಾವುದೇ ಸಾಧ್ಯತೆಗಳು ಕಾಣಿಸದೇ ಇರುವುದರಿಂದ ಎನ್.ಎನ್ ವೊಹ್ರಾ ಅವರು ರಾಜ್ಯಪಾಲರಾಗಿರುವ ಅವಧಿಯಲ್ಲಿ ನಾಲ್ಕನೇ ಬಾರಿ ಕಣಿವೆ ರಾಜ್ಯ ಕೇಂದ್ರದ ಆಳ್ವಿಕೆ ಒಳಗಾಗಲಿದೆ. ವೊಹ್ರಾ 2008ರ ಜೂನ್ 25ರಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ವಿಶೇಷವೆಂದರೆ, ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ತಂದೆ ಪಿಡಿಪಿ ನಾಯಕ ಮುಫ್ತಿ ಮುಹಮ್ಮದ್ ಸಯೀದ್ ಅವರು ಈ ಹಿಂದೆ ಏಳು ಬಾರಿ ರಾಜ್ಯದಲ್ಲಿ ಕೇಂದ್ರಾಡಳಿತ ಹೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News