×
Ad

ಒಂಭತ್ತು ದಿನಗಳ ಧರಣಿ ಅಂತ್ಯಗೊಳಿಸಿದ ಕೆಜ್ರಿವಾಲ್ ಗೆ ಅನಾರೋಗ್ಯ

Update: 2018-06-20 19:30 IST

ಹೊಸದಿಲ್ಲಿ,ಜೂ.20: ಉಪ ರಾಜ್ಯಪಾಲ ಅನಿಲ ಬೈಜಾಲ್ ಅವರ ನಿವಾಸದಲ್ಲಿ ತನ್ನ ಸಂಪುಟ ಸಹೋದ್ಯೋಗಿಗಳೊಂದಿಗೆ ನಡೆಸಿದ ಒಂಭತ್ತು ದಿನಗಳ ಧರಣಿಯನ್ನು ಅಂತ್ಯಗೊಳಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗ ಅನಾರೋಗ್ಯ ಕಾಡುತ್ತಿದೆ.

ಕೇಜ್ರಿವಾಲ್ ಅವರ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಗುರುವಾರ ಅವರು ಕರ್ತವ್ಯಕ್ಕೆ ಮರಳಬಹುದು ಎಂದು ಮೂಲಗಳು ತಿಳಿಸಿದವು.

ಹಿರಿಯ ಐಎಎಸ್ ಅಧಿಕಾರಿಗಳೊಂದಿಗೆ ವಿಶ್ವಾಸ ನಿರ್ಮಾಣ ಮಾತುಕತೆ ಸೇರಿದಂತೆ ಕೇಜ್ರಿವಾಲ್ ಅವರು ಬುಧವಾರ ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮಗಳು ರದ್ದುಗೊಂಡಿವೆ.

ಸರಕಾರ ಮತ್ತು ಐಎಎಸ್ ಅಧಿಕಾರಿಗಳ ನಡುವಿನ ಬಿಕ್ಕಟ್ಟು ಅಂತ್ಯಗೊಂಡ ಬಳಿಕ ದಿಲ್ಲಿ ಸಚಿವಾಲಯ ಬುಧವಾರ ಎಂದಿನಂತೆ ಕಾರ್ಯ ನಿರ್ವಹಿಸಿದೆ. ಕೇಜ್ರಿವಾಲ್ ಜೊತೆ ಧರಣಿಯಲ್ಲಿ ಭಾಗಿಯಾಗಿದ್ದ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರು ಎರಡು ಸಭೆಗಳನ್ನು ನಡೆಸಿದ್ದು, ಸಂಬಂಧಿತ ಎಲ್ಲ ಐಎಎಸ್ ಅಧಿಕಾರಿಗಳು ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News