ಝೀರೋದಲ್ಲಿ ಶಾರುಕ್-ಸಲ್ಮಾನ್ ಡಾನ್ಸ್ ಜುಗಲ್‌ಬಂದಿ

Update: 2018-06-23 12:52 GMT

ಈದುಲ್ ಫಿತ್ರ್ ದಿನದಂದೇ ಶಾರುಕ್ ಅಭಿನಯದ ಝೀರೋ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನಲ್ಲಿ ಕುಳ್ಳನಾಗಿ ಕಾಣಿಸಿಕೊಂಡಿ ರುವ ಶಾರುಕ್ ಜೊತೆ ಸಲ್ಮಾನ್ ಖಾನ್ ಡಾನ್ಸ್ ಮಾಡುವ ದೃಶ್ಯ ಕಂಡು ಈ ನಟರ ಅಭಿಮಾನಿಗಳು ಪುಳಕಗೊಂಡಿದ್ದಾರೆ. ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಟೀಸರ್ ವ್ಯಾಪಕವಾಗಿ ಹರಿದಾಡುತ್ತಿದ್ದು, ಚಿತ್ರಪ್ರೇಮಿಗಳು ಝೀರೋದ ಬಿಡುಗಡೆಗಾಗಿ ತುದಿಗಾಲಲ್ಲಿ ನಿಂತುಕೊಳ್ಳುವಂತೆ ಮಾಡಿದೆ. ಶಾರುಕ್ ಖಾನ್, ಹಿಂದೆಂದೂ ಮಾಡಿರದಂತಹ ಕುಬ್ಜ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿ ರುವುದು ಝೀರೋ ಚಿತ್ರದ ಹೈಲೈಟ್. ತನುವೆಡ್ಸ್ ಮನು ಖ್ಯಾತಿಯ ಆನಂದ್ ಎಲ್.ರಾಯ್ ಚಿತ್ರವನ್ನು ನಿರ್ದೇಶಿಸಿ ದ್ದಾರೆ. ಟೀಸರ್‌ನ ಬಿಡುಗಡೆಯ ವೇಳೆ ಶಾರುಕ್ ಎಲ್ಲರಿಗೂ ಈದುಲ್‌ಫಿತ್ರ್‌ನ ಶುಭಾಶಯಗಳನ್ನು ಕೂಡಾ ಸಲ್ಲಿಸಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.ಶಾರುಕ್ ತನ್ನ ಹೋಂಬ್ಯಾನರ್ ರೆಡ್‌ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮೂಲಕ ನಿರ್ಮಿಸಿರುವ ಝೀರೋ ಡಿಸೆಂಬರ್ 21ರಂದು ತೆರೆಕಾಣಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News