ತೈಲ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ

Update: 2018-06-23 15:36 GMT

ಹೊಸದಿಲ್ಲಿ, ಜೂ.23: ಶನಿವಾರದಂದು ಪೆಟ್ರೋಲ್ ಬೆಲೆಯಲ್ಲಿ ದಿಲ್ಲಿಯಲ್ಲಿ ಒಂಬತ್ತು ಪೈಸೆ ಇಳಿಕೆಯಾಗಿದ್ದರೆ, ಮುಂಬೈಯಲ್ಲಿ 13 ಪೈಸೆಗಳ ಇಳಿಕೆ ಮಾಡಲಾಗಿದೆ. ಇದೇ ವೇಳೆ ಡೀಸೆಲ್ ದರದಲ್ಲಿ ದಿಲ್ಲಿ ಮತ್ತು ಮುಂಬೈಯಲ್ಲಿ ಕ್ರಮವಾಗಿ ಏಳು ಮತ್ತು ಹನ್ನೆರಡು ಪೈಸೆ ಇಳಿಕೆ ಮಾಡಲಾಗಿದೆ.

ಶನಿವಾರ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 75.93 ರೂ. ಆಗಿದ್ದರೆ ಡೀಸೆಲ್ ಬೆಲೆ 67.61ಕ್ಕೆ ತಲುಪಿದೆ. ದಿಲ್ಲಿಯಲ್ಲಿ ಅತಿಕಡಿಮೆ ಮಾರಾಟ ತೆರಿಗೆ ಮತ್ತು ವ್ಯಾಟ್ ಇರುವ ಕಾರಣ ದೇಶದ ಇತರ ಮೆಟ್ರೊ ನಗರಗಳು ಮತ್ತು ರಾಜ್ಯಗಳ ರಾಜಧಾನಿಗಳಿಗಿಂತ ಕಡಿಮೆ ಬೆಲೆಗೆ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಾಗುತ್ತಿದೆ. ಇದೇ ವೇಳೆ ಮುಂಬೈಯಲ್ಲಿ ಪೆಟ್ರೋಲ್ ಬೆಲೆ 83.61 ರೂ. ಆಗಿದ್ದರೆ ಡೀಸೆಲ್ 71.87 ರೂ. ತಲುಪಿದೆ. ಕರ್ನಾಟಕ ಚುನಾವಣೆ ಮುಗಿದ ನಂತರ ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು 19 ದಿನಗಳ ನಂತರ ದೈನಂದಿನ ದರ ಪರಿಷ್ಕರಣೆ ಮಾಡಿದ ಪರಿಣಾಮ ತೈಲ ಬೆಲೆ ಸರ್ವಕಾಲಿಕ ಏರಿಕೆ ಕಂಡಿತ್ತು. ಮೇ 29ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹಿಂದಿನೆಲ್ಲಾ ದಾಖಲೆಗಳನ್ನು ಮುರಿದು ಕ್ರಮವಾಗಿ 78.43 ರೂ. ಹಾಗೂ 69.31 ರೂ. ತಲುಪಿತ್ತು. ನಂತರ ಪೆಟೋಲ್ ಬೆಲೆಯಲ್ಲಿ 2.5 ರೂ. ಇಳಿಕೆಯಾಗಿದ್ದರೆ ಡೀಸೆಲ್ ಬೆಲೆ 1.70 ರೂ. ಕಡಿಮೆ ಮಾಡಲಾಗಿದೆ. ಯುಪಿಎ ಅಧಿಕಾರಾವಧಿಗೆ ಹೋಲಿಸಿದರೆ ಈಗಲೂ ತೈಲಬೆಲೆಗಳು ಅತ್ಯಧಿಕ ಮಟ್ಟದಲ್ಲಿವೆ. 2013ರ ಸೆಪ್ಟೆಂರ್ 14ರಂದ ಪೆಟ್ರೋಲ್ ಬೆಲೆ 76.06 ರೂ. ಆಗಿತ್ತು. 2014ರ ಮೇ 13ರಂದು ಡೀಸೆಲ್ ಬೆಲೆ 56.71 ರೂ. ಆಗಿದ್ದು ಅದುವರೆಗಿನ ಅತೀಹೆಚ್ಚಿನ ದರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News