ತೂತುಕುಡಿ: ಸ್ಟರ್ಲೈಟ್ ಘಟಕದಿಂದ 1300 ಟನ್ ಸಲ್ಫೂರಿಕ್ ಆ್ಯಸಿಡ್ ಹೊರಕ್ಕೆ; ಅಧಿಕಾರಿಗಳು

Update: 2018-06-23 16:58 GMT

ತೂತುಕುಡಿ, ಜೂ. 23: ಇಲ್ಲಿನ ಸ್ಟರ್ಲೈಟ್ ತಾಮ್ರ ಘಟಕದಿಂದ ಸಲ್ಫೂರಿಕ್ ಆ್ಯಸಿಡ್ ಸೋರಿಕೆ ಆಗುತ್ತಿರುವುದನ್ನು ಪತ್ತೆ ಹಚ್ಚಿದ ದಿನದ ಬಳಿಕ, ಇಲ್ಲಿನ ಆವರಣದಿಂದ 1,300 ಟನ್ ಸಲ್ಫೂರಿಕ್ ಆ್ಯಸಿಡ್ ಅನ್ನು ಹೊರ ತೆಗೆದಿದ್ದೇವೆ ಎಂದು ಉನ್ನತ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸಂದೀಪ್ ನಂದೂರಿ, ಇದುವರೆಗೆ 75 ಟ್ಯಾಂಕರ್‌ಗಳಿಂದ 1300 ಟನ್ ಸಲ್ಫೂರಿಕ್ ಆ್ಯಸಿಡ್ ಅನ್ನು ತೆಗೆದಿದ್ದೇವೆ ಎಂದಿದ್ದಾರೆ. ಸೋರಿಕೆ ತಡೆಯಲು ಹಾಗೂ ಅಪಾಯಕಾರಿ ರಾಸಾಯನಿಕವನ್ನು ತೆರವುಗೊಳಿಸಲು ತೂತುಕುಡಿಯಲ್ಲಿರುವ ಘಟಕದ ಆವರಣದಲ್ಲಿ ಅಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಪೊಲೀಸ್ ಭದ್ರತೆ ಯೊಂದಿಗೆ ಅವಕಾಶ ನೀಡಬೇಕು ಎಂದು ಕೋರಿ ಸ್ಟರ್ಲೈಟ್ ತಾಮ್ರ ಘಟಕ ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠದಲ್ಲಿ ಮನವಿ ಸಲ್ಲಿಸಿತ್ತು.

ಸೋರಿಕೆಯಿಂದ ವಿಧ್ವಂಸಕತೆಗೆ ಕಾರಣವಾಗಬಹುದು ಎಂದು ಸ್ಟರ್ಲೈಟ್ ತಾಮ್ರ ಘಟಕ ತನ್ನ ಮನವಿಯಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News