ವಿಶ್ವ ಕಪ್ 2022ಕ್ಕೆ ‘ಮ್ಯಾಜಿಕ್ ಸ್ಟೇಡಿಯಂ’

Update: 2018-06-26 18:35 GMT

ಕತರ್ ಆಯೋಜಿಸಲಿರುವ ವಿಶ್ವ ಕಪ್ 2022ಕ್ಕೆ ಚೀನಾ ಕಂಪೆನಿ ‘ಮ್ಯಾಜಿಕ್ ಸ್ಟೇಡಿಯಂ’ ನಿರ್ಮಿಸಲಿದೆ. ಇದು ಜಗತ್ತಿನ ಮೊದಲ ‘ಹಸಿರು ಸ್ಟೇಡಿಯಂ’ ಕೂಡ ಆಗಲಿದೆ. ಈ ನೂತನ ‘ರಾಸ್ ಅಬು ಅಬೌದ್ ಸ್ಟೇಡಿಯಂ’ನ ನಿರ್ಮಾಣದ ಹಿಂದೆ ಗುವಾಂಗ್‌ಡೋಂಗ್ ಮೂಲದ ಚೀನಾ ಅಂತರ್‌ರಾಷ್ಟ್ರೀಯ ಮರೈನ್ ಕಂಟೈನರ್ (ಸಿಐಎಂಸಿ) ಇದೆ. ಇದು ಪ್ರತ್ಯೇಕಿಸಬಹುದಾದ, ಚರ ಹಾಗೂ ಪುನರ್ ಬಳಕೆಯ ಸ್ಟೇಡಿಯಂ. ಫಿಫಾ ವಿಶ್ವ ವರ್ಲ್ಡ್ ಕಪ್‌ನ ಇತಿಹಾಸದಲ್ಲಿ ಇದೇ ಮೊದಲು ಆಗಲಿದೆ.

ಈ ಸ್ಟೇಡಿಯಂ 990 ಮಾಡ್ಯುಲರ್ ಕಂಟೈನರ್ ಅನ್ನು ಒಳಗೊಳ್ಳಲಿದೆ.

7 ಮಹಡಿಯ ಪ್ರತ್ಯೇಕಿಸಬಹುದಾದ ಮಾಡ್ಯುಲರ್ ಕಟ್ಟಡ ಇದಾಗಿದೆ.

ಈ ಪ್ರತ್ಯೇಕಿಸಬಹುದಾದ ಸ್ಟೇಡಿಯಂ ಅನ್ನು ಇತರ ಸ್ಫರ್ಧೆಗಳಿಗೆ ಮರು ಬಳಕೆ ಮಾಡಬಹುದು. ಇದನ್ನು ಸಣ್ಣ ಸ್ಥಳಗಳಲ್ಲಿ ಸಣ್ಣ ಭಾಗವನ್ನು ಪ್ರತ್ಯೇಕವಾಗಿ ಜೋಡಿಸಬಹುದು ಎಂದು ಇದಕ್ಕೆ ಸಂಬಂಧಿಸಿದ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

990 ಮಾಡ್ಯುಲರ್ ಕಂಟೈನರ್‌ಗಳಲ್ಲಿ ಪ್ರತಿ ಕಂಟೈನರ್‌ಗಳು 6×25××25 ಮೀ. (ಉದ್ದ ಅಗಲ×ಎತ್ತರ). ಇದನ್ನು ನಿವೇಶನದಲ್ಲಿ ಜೋಡಿಸುವ ಸಂದರ್ಭ ವಿವಿಧ ಬಣ್ಣಗಳಲ್ಲಿ ವಿವಿಧ ಮಾದರಿಗಳಲ್ಲಿ ವಿನ್ಯಾಸ ಹಾಗೂ ಅಲಂಕಾರಗೊಳಿಸಬಹುದು ಎಂದು ಯೋಜನೆಯ ಮ್ಯಾನೇಜರ್ ವಾಂಗ್ ಫೆಯಿ ತಿಳಿಸಿದ್ದಾರೆ.

ಮಾದರಿ ಕಂಟೈನರ್‌ಗಳು ಉತ್ತಮ ಸಿದ್ಧ ಬಾತ್‌ರೂಮ್, ಕಡು ಕಿತ್ತಳೆ ಬಣ್ಣದ ಒಳಗಿನ ಭಿತ್ತಿ, ಕಪ್ಪು ವಿಭಜನ ಹಾಗೂ ಶಾಂಪೈನ್ ಬಂಗಾರ ಬಣ್ಣದ ಹಾಲ್ ಅನ್ನು ಒಳಗೊಂಡಿದ್ದು ಆತ್ಯಾಧುನಿಕ ಸ್ಟಾರ್ ಹೊಟೇಲ್‌ನಂತೆ ಇದೆ. ನಿವೇಶನ ಆಯ್ಕೆ ಮಾಡಿದ ಬಳಿಕ ಪೂರ್ಣ ಸ್ಟೇಡಿಯಂ ಅನ್ನು ಸ್ಟೀಲ್ ಸ್ಟ್ರಕ್ಚರ್‌ನಲ್ಲಿ ರೂಪಿಸಲಾಗುತ್ತದೆ.

ಲೆಗೊ ಬಿಲ್ಡಿಂಗ್ ಬ್ಲಾಕ್‌ನಂತಹ ಸ್ಥಳಗಳಲ್ಲಿ ಈ ಕಂಟೈನರ್‌ಗಳನ್ನು ಅಳವಡಿಸಲಾಗುತ್ತದೆ. ಸಿದ್ಧಗೊಳಿಸಿದ ಬಳಿಕ ಸ್ಟೇಡಿಯಂಗೆ ಬಣ್ಣ ಬಳಿಯಲಾಗುತ್ತದೆ ಹಾಗೂ ವಿನ್ಯಾಸಗೊಳಿಸಲಾಗುತ್ತದೆ. ಸ್ಟೇಡಿಯಂ ಅನ್ನು ಸಂಪೂರ್ಣವಾಗಿ ಆರ್ಥಿಕವಾಗಿ ಕೈಗೆಟಕುವಂತೆ ಮತ್ತು ನಂತರ ನಿರಾಶ್ರಿತರ ವಸತಿಯಾಗಿ ಪರಿವರ್ತಿಸಬಹುದು. ಇದಲ್ಲದೆ, ಸ್ಟೇಡಿಯಂ ಇರುವ ಸ್ಥಳವನ್ನು ಕೂಡಲೇ ಹಸಿರು ಪಾರ್ಕ್ ಆಗಿ ಪರಿವರ್ತಿಸಬಹುದು ಎಂದು ಫೆಯಿ ತಿಳಿಸಿದ್ದಾರೆ. 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News