ಫಿಫಾ ವಿಶ್ವಕಪ್ ನಿಂದ ಜರ್ಮನಿಯನ್ನು ಹೊರದಬ್ಬಿದ ದಕ್ಷಿಣ ಕೊರಿಯಾ
Update: 2018-06-27 21:49 IST
ಕಝಾನ್, ಜೂ.27: ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ 2-0 ಅಂತರದಿಂದ ಸೋಲುಂಡ ಕಳೆದ ಬಾರಿಯ ಚಾಂಪಿಯನ್ ಜರ್ಮನಿ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಗ್ರೂಪ್ ಸ್ಟೇಜ್ ನಿಂದ ಜರ್ಮನಿ ಹೊರ ಬೀಳುತ್ತಿರುವುದು 80 ವರ್ಷಗಳಲ್ಲೇ ಇದು ಮೊದಲನೆ ಬಾರಿಯಾಗಿದೆ.
ಹಾಲಿ ಚಾಂಪಿಯನ್ ಜರ್ಮನಿ ತಂಡವನ್ನು ಬುಧವಾರ ನಡೆದ ಫಿಫಾ ವಿಶ್ವಕಪ್‌ನ ‘ಎಫ್’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಹೊರದಬ್ಬಿದೆ.
ಕಿಮ್ ಯಂಗ್ ಗೋವ್ನ್ (90+2) ಮತ್ತು ಸನ್ ಹಿಯಂಗ್ ಮಿನ್(90+6) ಗಳಿಸಿದ ಎರಡು ಗೋಲು ನೆರವಿನಿಂದ ದಕ್ಷಿಣ ಕೊರಿಯಾ ತಂಡ 2-0 ಅಂತರದಲ್ಲಿ ಜರ್ಮನಿಗೆ ಸೋಲುಣಿಸಿದೆ.
ಸ್ವೀಡನ್ ಪ್ರಿ ಕ್ವಾರ್ಟರ್ ಫೈನಲ್ ಗೆ: ಇನ್ನೊಂದು ಪಂದ್ಯದಲ್ಲಿ ಮೆಕ್ಸಿಕೊವನ್ನು 3-0 ಅಂತರದಲ್ಲಿ ಮಣಿಸಿದ ಸ್ವೀಡನ್ ಪ್ರಿ ಕ್ವಾರ್ಟರ್ ಫೈನಲ್ ತಲುಪಿದೆ.