ವೋಲ್ಟೇಜ್ ನಲ್ಲಿ ಏರಿಳಿತವಾಗಿ ಎಸಿ ನಿಷ್ಕ್ರಿಯ: ಎರಡು ನವಜಾತ ಶಿಶುಗಳು ಮೃತ್ಯು

Update: 2018-06-27 16:26 GMT

ಪಾನಿಪತ್, ಜೂ.27: ವೋಲ್ಟೇಜ್ ನಲ್ಲಿ ಏರಿಳಿಕೆಯಾದದ್ದರಿಂದ ಎಸಿ ನಿಷ್ಕ್ರಿಯಗೊಂಡ ಪರಿಣಾಮ ಎರಡು ನವಜಾತ ಶಿಶುಗಳು ಮೃತಪಟ್ಟು ನಾಲ್ವರು ಮಕ್ಕಳ ಆರೋಗ್ಯ ಸ್ಥಿತಿ ಗಂಭೀರಾವಸ್ಥೆಗೆ ತಲುಪಿದ ಘಟನೆ ಹರ್ಯಾಣದ ಪಾಣಿಪತ್ ನಲ್ಲಿ ನಡೆದಿದೆ.

ಸೋಮವಾರ ಇಬ್ಬರು ಮಕ್ಕಳನ್ನು ಪಾಣಿಪತ್ ನ ಆಸ್ಪತ್ರೆಯ ನವಜಾತ ಶಿಶುಗಳ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇಬ್ಬರು ಮಕ್ಕಳು ಮೃತಪಟ್ಟಿರುವ ವರದಿಯನ್ನು ಆಸ್ಪತ್ರೆ ದೃಢೀಕರಿಸಿದೆ. ವೋಲ್ಟೇಜ್ ಸಮಸ್ಯೆ ಕಾಣಿಸಿಕೊಂಡ ನಂತರ ತಕ್ಷಣ ನಾಲ್ವರು ಮಕ್ಕಳನ್ನು ಖಾನ್ಪುರ್ ಹಾಗು ಸೋನಿಪತ್ ನ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಲಾಯಿತು. ಆದರೆ ಆ್ಯಂಬುಲೆನ್ಸ್ ನ ವ್ಯವಸ್ಥೆ ಇಲ್ಲದೆ ಇದ್ದುದರಿಂದ ಮಂಗಳವಾರವಷ್ಟೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಯಿತು.

ಈ ವ್ಯಾಪ್ತಿಯಲ್ಲಿ ವೋಲ್ಟೇಜ್ ಸಮಸ್ಯೆಯಿದೆ. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಮುಖ್ಯ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News