ಕಾಶ್ಮೀರದಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಎಂಬ ವಿಶ್ವಸಂಸ್ಥೆಯ ವರದಿ: ಸೇನಾ ಮುಖ್ಯಸ್ಥ ರಾವತ್ ಪ್ರತಿಕ್ರಿಯಿಸಿದ್ದು ಹೀಗೆ

Update: 2018-06-27 16:40 GMT

ಹೊಸದಿಲ್ಲಿ, ಜೂ.27: ಜಮ್ಮು-ಕಾಶ್ಮೀರದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ವಿಶ್ವಸಂಸ್ಥೆ ವರದಿ ಪ್ರೇರೇಪಿತವಾಗಿದ್ದು ಇಂತಹ ಅನಗತ್ಯ ವರದಿಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಮಾನವಹಕ್ಕುಗಳ ವಿಷಯದಲ್ಲಿ ಭಾರತದ ಸೇನೆ ಅತ್ಯುತ್ತಮ ದಾಖಲೆ ಹೊಂದಿದೆ. ಆದ್ದರಿಂದ ಈ ವರದಿಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ವಿಶ್ವಸಂಸ್ಥೆಯ ಕೆಲವು ವರದಿಗಳು ಪ್ರೇರೇಪಿತವಾಗಿದೆ ಎಂದು ರಾವತ್ ಹೇಳಿದ್ದಾರೆ.

  ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದ್ದು ಈ ಬಗ್ಗೆ ಅಂತಾರಾಷ್ಟ್ರೀಯ ತನಿಖೆಯ ಅಗತ್ಯವಿದೆ ಎಂದು ಕಳೆದ ಜೂನ್ 14ರಂದು ಬಿಡುಗಡೆಗೊಂಡ ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿತ್ತು. ಇದೊಂದು ಪ್ರೇರೇಪಿತ, ಪಕ್ಷಪಾತದ ಹಾಗೂ ನಿರಾಶಾದಾಯಕ ವರದಿಯಾಗಿದೆ ಎಂದು ಈಗಾಗಲೇ ತಿಳಿಸಿರುವ ಭಾರತ ವರದಿಯನ್ನು ತಳ್ಳಿಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News