ಟ್ರಂಪ್ ಮಾತುಗಳಿಂದ ಬೇಸತ್ತು ಎಸ್ಟೋನಿಯ ರಾಯಭಾರಿ ರಾಜೀನಾಮೆ
ವಾಶಿಂಗ್ಟನ್, ಜು. ೧: ಐರೋಪ್ಯ ಒಕ್ಕೂಟದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳು ಮತ್ತು ಐರೋಪ್ಯ ಮಿತ್ರ ದೇಶಗಳನ್ನು ಅವರು ನಡೆಸಿಕೊಳ್ಳುತ್ತಿರುವ ರೀತಿಯಿಂದ ಬೇಸತ್ತು ಎಸ್ಟೋನಿಯಕ್ಕೆ ಅಮೆರಿಕ ರಾಯಭಾರಿ ಜೇಮ್ಸ್ ಡಿ. ಮೆಲ್ವಿಲ್ ರಾಜೀನಾಮೆ ನೀಡಿದ್ದಾರೆ.
‘‘ಅಮೆರಿಕದಿಂದ ಪ್ರಯೋಜನಗಳನ್ನು ಪಡೆಯಲು ಮತ್ತು ನಮ್ಮ ಪಿಗ್ಗಿ ಬ್ಯಾಂಕ್ ಮೇಲೆ ದಾಳಿ ಮಾಡಲು ಐರೋಪ್ಯ ಒಕ್ಕೂಟವನ್ನು ರಚಿಸಲಾಗಿದೆ ಹಾಗೂ ನ್ಯಾಫ್ತಾದಷ್ಟೇ ನ್ಯಾಟೊ ಕೂಡ ಕೆಟ್ಟದು ಎಂಬ ಹೇಳಿಕೆಗಳನ್ನು ಅಧ್ಯಕ್ಷರು ನೀಡಿದ್ದಾರೆ. ಈ ಹೇಳಿಕೆಗಳು ವಾಸ್ತವಿಕವಾಗಿ ತಪ್ಪು. ನಾನು ಅಧಿಕಾರದಿಂದ ಕೆಳಗಿಳಿಯಲು ಸಕಾಲ ಎನ್ನುವುದನ್ನೂ ಇದು ತೋರಿಸುತ್ತದೆ’’ ಎಂದು ಶುಕ್ರವಾರ ತನ್ನ ಖಾಸಗಿ ಫೇಸ್‌ಬುಕ್ ಸಂದೇಶದಲ್ಲಿ ಅವರು ಹೇಳಿದ್ದಾರೆ.
ಅವರು ೨೦೧೫ರಿಂದ ನ್ಯಾಟೊ ಸದಸ್ಯ ದೇಶವೂ ಆಗಿರುವ ಎಸ್ಟೋನಿಯಕ್ಕೆ ಅಮೆರಿಕದ ರಾಯಭಾರಿಯಾಗಿದ್ದಾರೆ.
ಅವರು ಈ ಹಿಂದೆ ಬರ್ಲಿನ್, ಲಂಡನ್ ಮತ್ತು ಮಾಸ್ಕೋಗಳಲ್ಲಿನ ಅಮೆರಿಕ ರಾಯಭಾರ ಕಚೇರಿಗಳಲ್ಲೂ ಸೇವೆ ಸಲ್ಲಿಸಿದ್ದಾರೆ.