×
Ad

ಜಗತ್ತಿನ ಮೊದಲ ಶುಲ್ಕರಹಿತ ವಿಶ್ವವಿದ್ಯಾಲಯ ಸ್ಥಾಪನೆ : ಇದು ಎಲ್ಲಿದೆ ಗೊತ್ತಾ ?

Update: 2018-07-01 22:17 IST

ಇಸ್ಲಾಮಾಬಾದ್, ಜು. ೧: ಜಗತ್ತಿನ ಮೊದಲ ಶುಲ್ಕರಹಿತ ವಿಶ್ವವಿದ್ಯಾನಿಲಯವು ಪಾಕಿಸ್ತಾನದಲ್ಲಿ ಮುಂದಿನ ತಿಂಗಳು ಅಸ್ತಿತ್ವಕ್ಕೆ ಬರಲಿದೆ. ಮೂರು ಸ್ನಾತಕೋತ್ತರ ಪದವಿಗಳನ್ನು ನೀಡುವ ವಿಶ್ವವಿದ್ಯಾನಿಲಯದಲ್ಲಿ ಈಗಾಗಲೇ ೬೦೦ ಮಂದಿ ನೋಂದಾಯಿಸಿದ್ದಾರೆ.

ಲಾಹೋರ್ ಸಮೀಪದ ಕಸೂರ್ ಜಿಲ್ಲೆಯಲ್ಲಿ ಸ್ಥಾಪನೆಗೊಂಡಿರುವ ಉನ್ನತ ಶಿಕ್ಷಣ ಸಂಸ್ಥೆಯು ಆಗಸ್ಟ್ ೪ರಂದು ಉದ್ಘಾಟನೆಗೊಳ್ಳಲಿದೆ ಎಂದು ಪಾಕಿಸ್ತಾನದಲ್ಲಿ ಬಡ್ಡಿರಹಿತ ಸಾಲ ನೀಡುವ ಹಣಕಾಸು ಸಂಸ್ಥೆ ‘ಅಖುವತ್’ನ ಕಾರ್ಯಕಾರಿ ನಿರ್ದೇಶಕ ಡಾ. ಮುಹಮ್ಮದ್ ಅಮ್ಜದ್ ಸಾಕಿಬ್ ‘ಖಲೀಜ್ ಟೈಮ್ಸ್’ಗೆ ಹೇಳಿದ್ದಾರೆ.

‘‘ಇದೊಂದು ದೀರ್ಘಾವಧಿಯ ಬಡ್ಡಿರಹಿತ ಸಾಲವಾಗಿದೆ. ಇಲ್ಲಿ ಮೊದಲು ಶಿಕ್ಷಣ ನೀಡಲಾಗುತ್ತದೆ. ಬಳಿಕ ವಿದ್ಯಾರ್ಥಿಗಳು ಸಂಪಾದಿಸಲು ಸಮರ್ಥರಾದ ಬಳಿಕ, ಅಂದರೆ ೫, ೧೦ ಅಥವಾ ೨೦ ವರ್ಷಗಳ ಬಳಿಕ ಅದರ ಶುಲ್ಕವನ್ನು ಕೊಡಬೇಕು’’ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News