×
Ad

ಕಣ್ಣೂರು: ಮತ್ತೆ ಭುಗಿಲೆದ್ದ ಹಿಂಸಾಚಾರ

Update: 2018-07-01 22:22 IST

ಕಣ್ಣೂರು, ಜು.1: ಕೆಲವು ಸಮಯದಿಂದ ಶಾಂತಿ ನೆಲೆಸಿದ್ದ ಕಣ್ಣೂರು ಜಿಲ್ಲೆಯಲ್ಲಿ ರವಿವಾರ ಮತ್ತೆ ಹಿಂಸೆ ಸ್ಫೋಟಿಸಿದ್ದು, ನಾಲ್ವರು ಸಿಪಿಎಂ ಕಾರ್ಯಕರ್ತರನ್ನು ಬಿಜೆಪಿ ಬೆಂಬಲಿಗರ ಗುಂಪೊಂದು ಮಾರಕಾಯುಧಗಳಿಂದ ಕಡಿದು ಗಾಯಗೊಳಿಸಿದೆ. ಘಟನೆ ನಡೆದ ಬೆನ್ನಲ್ಲೇ ಇಂದು ಸಂಜೆ ಸಿಪಿಎಂ ಕಾರ್ಯಕರ್ತರೆನ್ನಲಾದ ತಂಡವೊಂದು ಮೂವರು ಬಿಜೆಪಿ ಕಾರ್ಯಕರ್ತರಿಗೆ ಇರಿದು ಗಾಯಗೊಳಿಸಿದ್ದಾರೆ.

ಇಂದು ಮಧ್ಯಾಹ್ನ ಮಟ್ಟನ್ನೂರು ಜಿಲ್ಲೆಯಲ್ಲಿ ನಾಲ್ವರು ಸಿಪಿಎಂ ಕಾರ್ಯಕರ್ತರು ಕಾರೊಂದರಲ್ಲಿ ಪ್ರಯಾಣಿಸುತ್ತಿದ್ದಾಗ, ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದರೆಂದು ಮೂಲಗಳು ತಿಳಿಸಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿದೆ. ಈ ವರ್ಷದ ಮೇ ತಿಂಗಳಲ್ಲಿ ಮಟ್ಟಾನ್ನೂರು ಸಮೀಪವೇ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಓರ್ವ ಸಿಪಿಎಂ ಕಾರ್ಯಕರ್ತ ಹಾಗೂ ಬಿಜೆಪಿ ಕಾರ್ಯಕರ್ತ ಕೊಲ್ಲಲ್ಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News