ಸೋನಾಲಿ ಬೇಂದ್ರೆಗೆ ಕ್ಯಾನ್ಸರ್

Update: 2018-07-04 08:28 GMT

ಹೊಸದಿಲ್ಲಿ, ಜು.4: ತಾನು ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಹಾಗು ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಇನ್ ಸ್ಟಾಗ್ರಾಮ್ ಹಾಗು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

"ನಾನು ಕ್ಯಾನ್ಸರ್ ನಿಂದ ಬಳಲುತ್ತಿರುವುದು ಇತ್ತೀಚೆಗಷ್ಟೇ ತಿಳಿದುಬಂತು. ನನ್ನ ಕುಟುಂಬ ಹಾಗು ಆಪ್ತ ಸ್ನೇಹಿತರು ನನ್ನ ಜೊತೆಗೇ ಇದ್ದಾರೆ. ಪ್ರತಿಯೊಬ್ಬರಿಗೂ ನಾನು ಕೃತಜ್ಞಳಾಗಿದ್ದೇನೆ. ತಕ್ಷಣದ ಕ್ರಮದ ಹೊರತಾಗಿ ಇದನ್ನು ತಡೆಯಲು ಬೇರೆ ಮಾರ್ಗಗಳೇ ಇಲ್ಲ. ಆದ್ದರಿಂದ ನನ್ನ ವೈದ್ಯರ ಸಲಹೆಯಂತೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ" ಎಂದವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸೊನಾಲಿ ಬೇಂದ್ರೆಯವರ ಟ್ವೀಟ್ ಗೆ ಬಾಲಿವುಡ್ ಸೆಲೆಬ್ರಿಟಿಗಳು ಆಘಾತ ವ್ಯಕ್ತಪಡಿಸಿದ್ದಾರೆ. 1994ರಲ್ಲಿ ಗೋವಿಂದ ನಟನೆಯ 'ಆಗ್' ಮೂಲಕ ಸೋನಾಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು. 'ಸರ್ಫ್ ರೋಷ್', ಡ್ಯುಪ್ಲಿಕೇಟ್, 'ಮೇಜರ್ ಸಾಬ್', 'ಹಮ್ ಸಾಥ್ ಸಾಥ್ ಹೇ' ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದ 'ಪ್ರೀತ್ಸೆ' ಸಿನೆಮಾದಲ್ಲೂ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News