ಈ ರಾಜ್ಯದಲ್ಲಿ ಈಗ ಸರಕಾರಿ ಅಧಿಕಾರಿಗಳಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆ ಕಡ್ಡಾಯ

Update: 2018-07-04 15:33 GMT

ಚಂಡಿಗಡ,ಜು.4: ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆದಾರರಿಗೆ ಮರಣ ದಂಡನೆಯನ್ನು ವಿಧಿಸುವಂತೆ ಪಂಜಾಬ್ ಸಂಪುಟವು ಕೇಂದ್ರಕ್ಕೆ ಶಿಫಾರಸು ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲ ಸರಕಾರಿ ಅಧಿಕಾರಿಗಳು ತಮ್ಮ ನೇಮಕದ ಸಮಯದಿಂದ ಹಿಡಿದು ತಮ್ಮ ಸೇವೆಯ ಪ್ರತಿಯೊಂದು ಹಂತದಲ್ಲಿಯೂ ಕಡ್ಡಾಯವಾಗಿ ಮಾದಕ ದ್ರವ್ಯ ಸೇವನೆ ಪರೀಕ್ಷೆಗೊಳಗಾಗಬೇಕು ಎಂದು ಬುಧವಾರ ಆದೇಶಿಸಿದ್ದಾರೆ.

ಇದಕ್ಕಾಗಿ ವಿಧಿವಿಧಾನಗಳನ್ನು ರೂಪಿಸುವಂತೆ ಮತ್ತು ಅಗತ್ಯ ಅಧಿಸೂಚನೆಯನ್ನು ಹೊರಡಿಸುವಂತೆ ಅವರು ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶ ನೀಡಿದರು. ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಹೆಚ್ಚುತ್ತಿರುವ ಸಾವುಗಳ ಕುರಿತು ಪ್ರತಿಭಟನೆಗಳ ನಡುವೆಯೇ ಸೋಮವಾರ ನಡೆದಿದ್ದ ಸಂಪುಟ ಸಭೆಯು ಮಾದಕದ್ರವ್ಯ ಮಾರಾಟಗಾರರು ಮತ್ತು ಕಳ್ಳಸಾಗಾಣಿಕೆದಾರರಿಗೆ ಮರಣ ದಂಡನೆ ವಿಧಿಸುವುದನ್ನು ಎನ್‌ಡಿಪಿಎಸ್ ಕಾಯ್ದೆಯಲ್ಲಿ ಸೇರಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News