×
Ad

ಪ್ರಾಣಿ ಹಿಡಿಯುವ ಸಂದರ್ಭ ಜನ ಜಮಾವಣೆ: ಕಲಂ 144 ಬಳಸಲು ವನ್ಯಜೀವಿ ಮಂಡಳಿ ಶಿಫಾರಸು

Update: 2018-07-08 21:53 IST

ಹೊಸದಿಲ್ಲಿ, ಜು. 8: ವನ್ಯಜೀವಿ ತುರ್ತು ಪರಿಸ್ಥಿತಿ ಸಂದರ್ಭ ಜನರು ಗುಂಪು ಸೇರುವುದನ್ನು ತಡೆಗಟ್ಟಲು ಸಿಆರ್‌ಪಿಸಿಯ 144ನೇ ಕಲಂ ಅನ್ನು ರಾಜ್ಯ ಸರಕಾರ ಬಳಸಬೇಕು ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿ ಶಿಫಾರಸು ಮಾಡಿದೆ.

ವಿಶೇಷವಾಗಿ ಭಾರತದಂತಹ ಹೆಚ್ಚು ಜನಸಂಖ್ಯೆ ಇರುವ ದೇಶಗಳಲ್ಲಿ ಸಾಮಾನ್ಯವಾಗಿ ಮಾನವ-ವನ್ಯಜೀವಿ ಸಂಘರ್ಷದ ಸಂದರ್ಭ ಜನಸಂದಣಿ ನಿಯಂತ್ರಣ ಅತಿ ದೊಡ್ಡ ಸವಾಲು. 2016ರಲ್ಲಿ ಗುರ್ಗಾಂವ್‌ನಲ್ಲಿ 8 ಮಂದಿಗೆ ಗಾಯಗೊಳಿಸಿದ ಚಿರತೆಯೊಂದನ್ನು ಗ್ರಾಮಸ್ಥರು ಥಳಿಸಿ ಕೊಂದಿದ್ದರು. ‘‘ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸುವುದು ನಮ್ಮ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡುತ್ತಿದೆ’’ ಎಂದು ಪ್ರಾಣಿಗಳನ್ನು ಮತ್ತು ಬರಿಸುವ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್‌ನಲ್ಲಿ ನಡೆದ ಮಂಡಳಿ ಸಭೆಯ ನಿಲುವಳಿಯಲ್ಲಿ ವನ್ಯಜೀವಿ ತುರ್ತು ಪರಿಸ್ಥಿತಿ ಹದಗೆಡಲು ಕಾರಣವಾಗುವ ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವಿಕೆಯನ್ನು ತಡೆಯಲು ಕಾನೂನು ಬಳಸಬೇಕು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವಾಲಯ ರಾಜ್ಯ ಸರಕಾರಗಳಿಗೆ ಸಲಹೆಗಳನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ‘‘ಮಾನವ-ವನ್ಯಜೀವಿ ಸಂಘರ್ಷದ ಸಂದರ್ಭ ಜನರು ಮಧ್ಯಪ್ರವೇಶಿಸುತ್ತಾರೆ. ಇದು ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಹಲವು ಸಂದರ್ಭಗಳಲ್ಲಿ ಪ್ರಾಣಿಯನ್ನು ಹತ್ಯೆಗೈಯಲಾಗುತ್ತದೆ’’ ಎಂದು ಲೇಖಕಿ ಹಾಗೂ ವನ್ಯ ಜೀವಿ ಸಂರಕ್ಷಣಾಗಾರ್ತಿ ಜಾನಕಿ ಲೆನಿನ್ ಹೇಳಿದ್ದಾರೆ.

‘‘ವನ್ಯಜೀವಿ ತುರ್ತು ಪರಿಸ್ಥಿತಿ ಸಂದರ್ಭ ಈಗ ಅಸ್ತಿತ್ವದಲ್ಲಿರುವ ಶಿಷ್ಟಾಚಾರಗಳನ್ನು ಸೂಕ್ತವಾಗಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಹಾಗೂ ಇಂತಹ ಪ್ರಕರಣಗಳಲ್ಲಿ ಸ್ಥಳೀಯ ಕಾನೂನು ಜಾರಿ ನಿರ್ದೇಶನಾಲಯ ಹಾಗೂ ಆಡಳಿತ ಮಂಡಳಿ ಒಳಗೊಂಡ ಅಂತರ್-ಸಂಸ್ಥೆಗಳ ಶ್ರಮ ಅಗತ್ಯ ಇದೆ ಎಂದು ವನ್ಯಜೀವಿ ರಕ್ಷಣಾ ಕಾರ್ಯಕರ್ತರು ವಾದಿಸಿದ್ದಾರೆ. ಬಾಕ್ಸ್ ಮಾನವನ ಸಾಮಿಪ್ಯ ವನ್ಯ ಜೀವಿಗಳು ಬಂದಾಗ ಉಂಟಾಗುವ ತುರ್ತು ಪರಿಸ್ಥಿತಿಗೆ ಗುಣಮಟ್ಟದ ಕಾರ್ಯಾಚರಣೆಯ ಕಾರ್ಯ ವಿಧಾನಗಳು ಅಥವಾ ಕ್ರಿಯಾ ಯೋಜನೆಗಳನ್ನು ವನ್ಯ ಜೀವಿ ಮಂಡಳಿ ಅಭಿವೃದ್ಧಿಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News