ದೇಶದಲ್ಲಿ ಮುಸ್ಲಿಮರನ್ನು ಗುರಿ ಮಾಡಲಾಗುತ್ತಿರುವುದರಿಂದ ನೋವಾಗಿದೆ: ನಟಿ ತಾಪ್ಸಿ

Update: 2018-07-10 17:01 GMT

ಹೊಸದಿಲ್ಲಿ, ಜು.10: ದೇಶದಲ್ಲಿ ಮುಸ್ಲಿಮರ ವಿರುದ್ಧದ ಪೂರ್ವಾಗ್ರಹ ಪೀಡಿತ ಭಾವನೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬಹುಭಾಷಾ ನಟಿ ತಾಪ್ಸಿ ಪನ್ನು, ನಿರ್ಧಿಷ್ಟ ಧರ್ಮವೊಂದನ್ನು ಗುರಿ ಮಾಡುವುದನ್ನು ಖಂಡಿಸಿದ್ದಾರೆ.

ತಮ್ಮ ಮುಂದಿನ ಚಿತ್ರ 'ಮುಲ್ಕ್'ನ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಒಂದು ಸಮುದಾಯವನ್ನು ಗುರಿ ಮಾಡುತ್ತಿರುವುದರಿಂದ ನೋವಾಗಿದೆ. ನನ್ನ ವೈಯಕ್ತಿಕ ಜೀವನದಿಂದಲೇ ನಾವು ಉದಾಹರಣೆ ನೀಡಬಲ್ಲೆ. ನನ್ನ ಮ್ಯಾನೇಜರ್ ಮುಸ್ಲಿಂ, ನನ್ನ ಚಾಲಕ, ನನ್ನ ಮನೆಯಲ್ಲಿ ಕೆಲಸ ಮಾಡುವವರು ಕೂಡ ಮುಸ್ಲಿಮರೇ. ನನ್ನ ಜೀವನವೇ ಇವರಿಂದ ನಡೆಯುತ್ತಿದೆ. ಇವರ ಉಪಸ್ಥಿತಿಯು ಒಂದು ವೇಳೆ ನನಗೆ ಕಿರಿಕಿರಿ ಎನಿಸಿದ್ದಲ್ಲಿ ನನಗೆ ಹಗಲು, ರಾತ್ರಿಗಳೆರಡೂ ಕಿರಿಕಿರಿ ಎನಿಸಬಹುದು. ಏಕೆಂದರೆ ನನ್ನ ಜೀವನವೇ ಇವರಿಂದ ನಡೆಯುತ್ತಿದೆ. ನಿರ್ದಿಷ್ಟ ಧರ್ಮವೊಂದನ್ನು ಗುರಿ ಮಾಡಲಾಗುತ್ತಿದೆ ಎನ್ನುವುದನ್ನು ಸಹಿಸಲಾಗದು. ಇವರೆಲ್ಲಾ ನನ್ನಿಂದ ದೂರವಾಗದಂತಹ ಜನರು" ಎಂದವರು ಹೇಳಿದರು.

ತಾಪ್ಸಿ ನಟನೆಯ 'ಮುಲ್ಕ್' ಚಿತ್ರವು ಮುಸ್ಲಿಮ್ ಕುಟುಂಬವೊಂದು ಅನುಭವಿಸುವ ಸಂಕಷ್ಟಗಳ ಬಗೆಗಿನ ಕಥೆಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News