ಕೇಂದ್ರದ ಆರೋಗ್ಯ ವಿಮೆಗೆ ಆಧಾರ್ ಕಡ್ಡಾಯ
Update: 2018-07-12 21:45 IST
ಹೊಸದಿಲ್ಲಿ, ಜು. 12: ಹತ್ತು ಕೋಟಿ ಕುಟುಂಬಕ್ಕೆ ತಲಾ 5 ಲಕ್ಷ ರೂ. ಆರೋಗ್ಯ ವಿಮೆ ನೀಡುವ ತನ್ನ ಸಾಮೂಹಿಕ ಆಯುಷ್ಮಾನ್ ಭಾರತ್ ಅಥವಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಕ್ಕೆ ಆಧಾರ್ ಕಾರ್ಡ್ ಬಳಕೆಯನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ.
ಸೇವೆಗಳು ಲಭ್ಯವಾಗುವ ಸಂದರ್ಭ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಲ್ಲ. ಆದರೆ, ಆಧಾರ್ ದಾಖಲಾತಿ ಅಥವಾ ದಾಖಲಾತಿಗೆ ಮನವಿ ಕಡ್ಡಾಯ. ಆಯುಷ್ಮಾನ್ ಭಾರತ್ ಈ ಆಗಸ್ಟ್ ತಿಂಗಳಲ್ಲಿ ಜಾರಿಗೆ ಬರಲಿದೆ.
ಈ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ಬಯಸುವ ಅರ್ಹ ಫಲಾನುಭವಿಗಳು ಆಧಾರ್ ಹೊಂದಿರುವುದಕ್ಕೆ ಆಧಾರ್ ಸಂಖ್ಯೆ ಅಥವಾ ಆಧಾರ್ ದೃಢೀಕರಣಕ್ಕೆ ಒಳಗಾದ ದಾಖಲೆಯನ್ನು ಸಲ್ಲಿಸುವ ಅಗತ್ಯತೆ ಇದೆ.