ಕಲ್ಲಿದ್ದಲು ಬ್ಲಾಕ್ ಹಂಚಿಕೆ ಹಗರಣ: ನವೀನ್ ಜಿಂದಾಲ್ ವಿರುದ್ಧ ಹೆಚ್ಚುವರಿ ಆರೋಪ ಪಟ್ಟಿ ರಚನೆ

Update: 2018-07-13 15:36 GMT

ಹೊಸದಿಲ್ಲಿ, ಜು. 13: ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಉದ್ಯಮಿ ನವೀನ್ ಜಿಂದಾಲ್ ವಿರುದ್ಧ ಲಂಚಕ್ಕೆ ಕುಮ್ಮಕ್ಕು ನೀಡಿದ ಹೆಚ್ಚುವರಿ ಆರೋಪವನ್ನು ರೂಪಿಸುವಂತೆ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ಆಗಸ್ಟ್ 16ರಂದು ಆರೋಪಿ ವಿರುದ್ಧ ಆರೋಪಗಳು ಔಪಚಾರಿಕವಾಗಿ ರೂಪುಗೊಳ್ಳಲಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಭರತ್ ಪರಾಶರ ಹೇಳಿದ್ದಾರೆ. ಈ ಪ್ರಕರಣದಲ್ಲಿ ಭ್ರಷ್ಚಾಚಾರ ತಡೆ ಕಾಯ್ದೆಯ ಸೆಕ್ಷನ್ ಹಾಗೂ ಐಪಿಸಿ ಅಡಿಯಲ್ಲಿ ಕ್ರಿಮಿನಲ್ ಸಂಚು, ವಂಚನೆ, ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ನವೀನ್ ಜಿಂದಾಲ್, ಕಲ್ಲಿದ್ದಲು ಸಹಾಯಕ ಸಚಿವ ರಾವ್ (ಮೃತ), ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ. ಗುಪ್ತಾ ಹಾಗೂ ಇತರ 11 ಮಂದಿಯ ವಿರುದ್ಧ ಆರೋಪ ರೂಪಿಸುವಂತೆ ನ್ಯಾಯಾಲಯ 2016 ಎಪ್ರಿಲ್‌ನಲ್ಲಿ ಆದೇಶಿಸಿತ್ತು. ಆದಾಗ್ಯೂ ಭ್ರಷ್ಟಾಚಾರ ತಡೆಯ ಕಾಯ್ದೆಯ ಸೆಕ್ಷನ್ 12 ಅಥವಾ ಸೆಕ್ಷನ್ 11ರ ಅಡಿಯಲ್ಲಿ ಆರೋಪ ರೂಪಿಸಿರಲಿಲ್ಲ. ಜಾರ್ಖಂಡನಲ್ಲಿ ಅಮರಕೊಂಡ ಮರುಗದಂಗಾಲ್ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News