ಕೇರಳ ಚರ್ಚ್ ನಲ್ಲಿ : ಲೈಂಗಿಕ ಹಗರಣ

Update: 2018-07-16 15:39 GMT

ಹೊಸದಿಲ್ಲಿ, ಜು. 16: ಕೇರಳದ ಮಲಂಕರ ಆರ್ಥೋಡಾಕ್ಸ್ ಸಿರಿಯನ್ ಚರ್ಚ್‌ಗೆ ಸೇರಿದ ನಾಲ್ವರು ಪಾದ್ರಿಗಳು ಭಾಗಿಯಾಗಿರುವ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಫಾದರ್ ಸೋನಿ ಅಬ್ರಹಾಂ ವರ್ಗೀಸ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈ 17ರಂದು ವಿಚಾರಣೆ ನಡೆಸಲಿದೆ.

 ಪ್ರಕರಣದಲ್ಲಿ ಬಂಧನವಾಗುವ ಸಾಧ್ಯತೆ ಇರುವುದರಿಂದ ಕೂಡಲೇ ವಿಚಾರಣೆ ನಡೆಸಬೇಕು ಎಂದು ಕೋರಿದ ಬಳಿಕ ಪಾದ್ರಿಯ ಮನವಿಯ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಒಪ್ಪಿಕೊಂಡಿದೆ. ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಇದೇ ಚರ್ಚ್‌ಗೆ ಸೇರಿದ ಮಹಿಳೆಯೋರ್ವರು ಹೇಳಿಕೆ ನೀಡಿದ ಆಧಾರದಲ್ಲಿ ಫಾದರ್ ವರ್ಗೀಸ್ ಹಾಗೂ ಇತರ ಮೂವರ ವಿರುದ್ಧ ಜುಲೈ 2ರಂದು ಕ್ರೈಮ್ ಬ್ರಾಂಚ್ ಪ್ರಕರಣ ದಾಖಲಿಸಿತ್ತು.

 ಈ ಹಿಂದೆ ಹೈಕೋರ್ಟ್ ಜಾಮೀನು ಮನವಿ ತಿರಸ್ಕರಿಸಿತ್ತು ಹಾಗೂ ಶರಣಾಗುವಂತೆ ಆದೇಶಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕ್ರೈಮ್ ಬ್ರಾಂಚ್ ಈಗಾಗಲೇ ಇಬ್ಬರನ್ನು ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News