ಡೆಹ್ರಾಡೂನ್: ಮೇಘ ಸ್ಫೋಟದಿಂದ ಪ್ರವಾಹ

Update: 2018-07-16 16:20 GMT

ಡೆಹ್ರಾಡೂನ್/ಗೋಪೇಶ್ವರ್, ಜು. 16: ಚಮೋಲಿ ಜಿಲ್ಲೆಯ ಥರಾಲಿ ಹಾಗೂ ಘಾಟ್ ಪ್ರದೇಶದಲ್ಲಿ ಸೋಮವಾರ ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದ ಸುಮಾರು 12 ಮನೆಗಳು, 10 ಅಂಗಡಿಗಳು ಹಾಗೂ 6 ವಾಹನಗಳು ಕೊಚ್ಚಿಕೊಂಡು ಹೋಗಿವೆ.

ಥರಾಲಿಯ ಧರ್ಬಾಗಢ ಪ್ರದೇಶದ ರಾತ್‌ಗಾಂವ್‌ನಲ್ಲಿ ಸುಮಾರು ಮುಂಜಾನೆ 3 ಗಂಟೆಗೆ ಮೇಘಸ್ಫೋಟ ಸಂಭವಿಸಿ ಪ್ರಾನ್ಮತಿ ನದಿ ಉಕ್ಕಿ ಹರಿದ ಪರಿಣಾಮ 10ಕ್ಕೂ ಅಧಿಕ ಅಂಗಡಿಗಳು, 6 ವಾಹನಗಳು ಕೊಚ್ಚಿಕೊಂಡು ಹೋಗಿವೆ ಎಂದು ಚಮೋಲಿಯಲ್ಲಿರುವ ಜಿಲ್ಲಾ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ. ಭಾರೀ ಮಳೆಯಿಂದ ಜಿಲ್ಲೆಯ ಘಾಟ್ ಪ್ರದೇಶದಲ್ಲಿರುವ ಧುರ್ಮಾ-ಕುಂದಿ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ. ಬಂಡೆಗಳು ಉರುಳಿ ಹಲವು ಮನೆಗಳು ಹಾಗೂ ದನದ ಹಟ್ಟಿ ನೆಲಸಮವಾಗಿದೆ ಎಂದು ಡೆಹ್ರಾಡೂನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

 ಚಮೋಲಿಯ ಸೇರಾಬಗಾಡ್ ಪ್ರದೇಶದ ವೌಕಾ ಮಲ್ಲಾ ಗ್ರಾಮದಲ್ಲಿ 7 ಮನೆಗಳು ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ತಂಡ ಈ ಪ್ರದೇಶಕ್ಕೆ ಧಾವಿಸಿದೆ ಎಂದು ಚಮೋಲಿ ಜಿಲ್ಲಾ ದಂಡಾಧಿಕಾರಿ ಆಶಿಶ್ ಜೋಷಿ ತಿಳಿಸಿದ್ದಾರೆ. ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಲಂಬಾಗಡ, ಪಿಪಾಲ್‌ಕೋಟಿ ಹಾಗೂ ಗೌಚಾರ್‌ನಲ್ಲಿ ಬೆಳಗ್ಗೆ ಕೆಲವು ಕಾಲ ಬದ್ರಿನಾಥ್ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ ಉಂಟಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News