×
Ad

ಅತ್ಯಾಚಾರ ಆರೋಪಿಗಳಿಗೆ ನ್ಯಾಯಾಲಯದ ಆವರಣದಲ್ಲಿ ಥಳಿಸಿದ ವಕೀಲರು

Update: 2018-07-17 20:14 IST

ಚೆನ್ನೈ, ಜು.17: ಹೌಸಿಂಗ್ ಕಾಲೊನಿಯ ನಿವಾಸಿಯಾಗಿದ್ದ 12ರ ಹರೆಯದ ಬಾಲಕಿಯ ಮೇಲೆ 7 ತಿಂಗಳಿಂದ 22 ಮಂದಿ ನಿರಂತರ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 17 ಆರೋಪಿಗಳ ಮೇಲೆ ವಕೀಲರ ಗುಂಪೊಂದು ನ್ಯಾಯಾಲಯದ ಆವರಣದಲ್ಲೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

  ಹೌಸಿಂಗ್ ಕಾಲೊನಿಯ ನಿರ್ವಹಣಾ ಸಿಬ್ಬಂದಿಗಳಾಗಿದ್ದವರೇ ಬಾಲಕಿಯನ್ನು ಅತ್ಯಾಚಾರ ಎಸಗಿರುವುದು ದುರಂತವಾಗಿದೆ. ಅಲ್ಲದೆ ಇವರಲ್ಲಿ ಹಲವರು ಸೆಕ್ಯುರಿಟಿ ಗಾರ್ಡ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದು 60 ವರ್ಷ ಮೀರಿದವರು. ಬಾಲಕಿಗೆ ರಕ್ಷಣೆ ನೀಡಬೇಕಾಗಿದ್ದ ಭದ್ರತಾ ಸಿಬ್ಬಂದಿಗಳೇ ಇಂತಹ ಹೀನ ಕೃತ್ಯ ಎಸಗಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

 ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ 17 ಆರೋಪಿಗಳನ್ನು ಮಂಗಳವಾರ ಮಹಿಳಾ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯದ ಆವರಣದಲ್ಲೇ ವಕೀಲರ ತಂಡವೊಂದು ಇವರ ಮೇಲೆ ಮುಗಿಬಿದ್ದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News