3ನೇ ಏಕದಿನ: ಭಾರತ 256/8
ಲೀಡ್ಸ್, ಜು.17: ಇಂಗ್ಲೆಂಡ್ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 256 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಟೀಮ್ ಇಂಡಿಯಾ ಪರ ನಾಯಕ ವಿರಾಟ್ ಕೊಹ್ಲಿ 71 ರನ್(72ಎ, 8ಬೌ) ಗಳಿಸುವ ಮೂಲಕ ತಂಡಕ್ಕೆ
ಗರಿಷ್ಠ ವೈಯಕ್ತಿಕ ವೈಯಕ್ತಿಕ ಕೊಡುಗೆ ನೀಡಿದರು.
ಶಿಖರ್ ಧವನ್ 44 ರನ್(49ಎ, 7ಬೌ) ಮತ್ತು ಮಹೇಂದ್ರ ಸಿಂಗ್ ಧೋನಿ 42 ರನ್(66ಎ, 4ಬೌ) ಗಳಿಸಿ ತಂಡದ ಸ್ಕೋರ್ 250ರ ಗಡಿ ದಾಟಲು ನೆರವಾದರು.
ರೋಹಿತ್ ಶರ್ಮ( 2) ಮತ್ತು ಸುರೇಶ್ ರೈನಾ (1) ಬೇಗನೆ ಔಟಾದರು. ದಿನೇಶ್ ಕಾರ್ತಿಕ್ (21) ಎರಡಂಕೆಯ ಕೊಡುಗೆ ನೀಡಿದರು.
ಶಾರ್ದುಲ್ ಠಾಕೂರ್ ಮತ್ತು ಭುವನೇಶ್ವರ್ ಕುಮಾರ್ 7 ನೇ ವಿಕೆಟ್‌ಗೆ 35 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಶಾರ್ದುಲ್ ಠಾಕೂರ್ 13 ಎಸೆತಗಳಲ್ಲಿ 2 ಸಿಕ್ಸರ್ ನೆರವಿನಲ್ಲಿ 22 ರನ್ ಗಳಿಸಿ ಔಟಾಗದೆ ಉಳಿದರು. ಭುವನೇಶ್ವರ್ ಕುಮಾರ್ 21 ರನ್ ಗಳಿಸಿ 50ನೇ ಓವರ್‌ನ ಕೊನೆಯ ಎಸೆತದಲ್ಲಿ ಡೇವಿಡ್ ವಿಲ್ಲಿಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್‌ನ ಆದಿಲ್ ರಶೀದ್ 49ಕ್ಕೆ 3 ವಿಕೆಟ್, ಡೇವಿಡ್ ವಿಲ್ಲಿ 40ಕ್ಕೆ 3, ಮಾರ್ಕ್‌ವುಡ್ 30ಕ್ಕೆ 1 ವಿಕೆಟ್ ಪಡೆದರು.