ಪಕ್ಷದಲ್ಲಿ ಸಿದ್ದು ಮೂಲೆಗುಂಪಾಗಲಿದ್ದಾರೆ ಎನ್ನುವ ವದಂತಿಗೆ ಹೀಗೆ ತೆರೆ ಎಳೆದರು ರಾಹುಲ್ ಗಾಂಧಿ

Update: 2018-07-17 17:15 GMT

ಹೊಸದಿಲ್ಲಿ, ಜು.17: ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಝಾದ್, ಅಹ್ಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಒಳಗೊಂಡ 23 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಮೊದಲ ಬಾರಿ ಪಕ್ಷದ ಅತ್ಯುನ್ನತ ಸಮಿತಿಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದಲ್ಲಿ ಸಿದ್ದು ಮೂಲೆಗುಂಪಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಹಾಗು ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಅತ್ಯಂತ ಆಪ್ತರು ಹಾಗು ವಿಶ್ವಾಸಕ್ಕೆ ಪಾತ್ರರಾದವರು ಮಾತ್ರ ಸ್ಥಾನ ಪಡೆಯುವ ಪಕ್ಷದ ಈ ನಿರ್ಣಾಯಕ ಸಮಿತಿಯಲ್ಲಿ ಸೇರುವ ಮೂಲಕ ಸಿದ್ದು ವಲಸೆ ನಾಯಕ, ಚುನಾವಣೆಯಲ್ಲಿ ಸೋತ ಬಳಿಕ ಅವರ ರಾಜಕೀಯ ಭವಿಷ್ಯ ಮುಗಿಯಿತು ಎಂದು ಹೇಳುತ್ತಿದ್ದವರಿಗೆ ಶಾಕ್ ನೀಡಿದ್ದಾರೆ ಸಿದ್ದರಾಮಯ್ಯ. ಪಕ್ಷದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದವರಿಗೂ ತೆರೆಯದ ಸಿಡಬ್ಯುಸಿ ಬಾಗಿಲು ಸಿದ್ದುಗೆ ಬಹಳ ಬೇಗ ತೆರೆದಿದೆ. ಆ ಮೂಲಕ ಅವರನ್ನು ಹೇಗಾದರೂ ಬದಿಗೆ ಸರಿಸಲು ಪ್ರಯತ್ನಿಸುತ್ತಿದ್ದ ಪಕ್ಷದ ಹಳೆ ಹುಲಿಗಳಿಗೆ ಅಚ್ಚರಿ, ಆಘಾತವಾಗಿದೆ.

ಕರ್ನಾಟಕದಿಂದ ಸಿಡಬ್ಯುಸಿಯಲ್ಲಿ ಸದಸ್ಯರಾಗಿ ಸ್ಥಾನ ಪಡೆದಿರುವ ಇನ್ನೊಬ್ಬರು ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ. ಅವರೀಗ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗು ಮಹಾರಾಷ್ಟ್ರ ಉಸ್ತುವಾರಿಯೂ ಆಗಿರುವುದರಿಂದ ಸಹಜವಾಗಿ ಸಿಡಬ್ಯುಸಿ ಸೇರಿದ್ದಾರೆ. ರಾಜ್ಯದ ಇನ್ನೊಬ್ಬ ಹಿರಿಯ ನಾಯಕ , ಸಂಸದ, ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಅವರು ಸಿಡಬ್ಯುಸಿ ವಿಶೇಷ ಆಹ್ವಾನಿತರಾಗಿ ನೇಮಕವಾಗಿದ್ದಾರೆ.

ಇಷ್ಟೇ ಅಲ್ಲದೆ 18 ಮಂದಿ ಶಾಶ್ವತ ಆಹ್ವಾನಿತರ ಹಾಗು 10 ಮಂದಿ ವಿಶೇಷ ಆಹ್ವಾನಿತರ ಸಮಿತಿಯನ್ನು ರಚಿಸಲಾಗಿದೆ. ಸೋನಿಯಾ ಗಾಂಧಿ ಹಾಗು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2019ರ ಲೋಕಸಭೆ ಚುನಾವಣೆಗೆ ಕೋರ್ ಟೀಮ್ ರಚಿಸಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾಗಲಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ರಚಿಸುತ್ತಿರುವ ಮೊದಲ ಕಾರ್ಯಕಾರಿ ಸಮಿತಿ ಇದಾಗಿದೆ.

ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರ ಪಟ್ಟಿ ಈ ಕೆಳಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News