×
Ad

ಮಕ್ಕಳ ಅಪಹರಣಗಾರ್ತಿ ಎಂದು ಮಾನಸಿಕ ಅಸ್ವಸ್ಥೆಗೆ ಥಳಿತ

Update: 2018-07-17 22:28 IST

ಜಲ್‌ಪಾಗುರಿ, ಜು. 17: ಮಕ್ಕಳ ಅಪಹರಣಗಾರ್ತಿ ಎಂಬ ಶಂಕೆಯಿಂದ ಮಾನಸಿಕ ಅಸ್ವಸ್ಥ ಮಹಿಳೆಯೋರ್ವರಿಗೆ ಗುಂಪೊಂದು ಥಳಿಸಿದ ಘಟನೆ ಉತ್ತರ ಬಂಗಾಳದ ಜಲ್‌ಪಾಗುರಿ ಜಿಲ್ಲೆಯಲ್ಲಿ ಸಂಭವಿಸಿದೆ.

ಧೂಪ್‌ಗುರಿ ಬ್ಲಾಕ್‌ನ ಬರೋಘಾರಿಯಾ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಸೋಮವಾರ ಸಂಜೆ 8 ಗಂಟೆಗೆ ಈ ಘಟನೆ ನಡೆದಿದೆ.

ಕಳೆದ ಕೆಲವು ದಿನಗಳಿಂದ ಮಹಿಳೆ ಈ ಪ್ರದೇಶದಲ್ಲಿ ಇದ್ದಾರೆ. ಅವರು ಮಕ್ಕಳನ್ನು ಸೆಳೆಯಲು ಕ್ಯಾಂಡಿಗಳ ಆಮಿಷ ತೋರಿ ಸುತ್ತಿದ್ದರು ಎಂದು ಬರೋಘಾರಿಯಾದ ನಿವಾಸಿ ಸಮೀರ್ ರಾಯ್ ಹೇಳಿದ್ದಾರೆ.

ಹಲ್ಲೆಗೊಳಗಾದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅನಂತರ ಬಿಡುಗಡೆಗೊಳಿಸಲಾಗಿದೆ. ‘‘ನಾವು ಘಟನೆಯ ತನಿಖೆ ನಡೆಸುತ್ತಿದ್ದೇವೆ. ಮಹಿಳೆಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ’’ ಎಂದು ಜಲ್‌ಪಾಗುರಿ ಪೊಲೀಸ್ ಅಧೀಕ್ಷಕ ಅಮಿತ್ವ ಮೈತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News