×
Ad

ಗುವಾಹಟಿ: ತೊಗಡಿಯಾ ಸಭೆಗಳಿಗೆ ನಿಷೇಧ

Update: 2018-07-17 22:48 IST

ಗುವಾಹಟಿ,ಜು.17: ಹೊಸದಾಗಿ ಸ್ಥಾಪನೆಯಾಗಿರುವ ಅಂತರರಾಷ್ಟ್ರೀಯ ಹಿಂದೂ ಪರಿಷದ್(ಎಎಚ್‌ಪಿ)ನ ಅಧ್ಯಕ್ಷ ಪ್ರವೀಣ್ ತೊಗಡಿಯಾ ಅವರು ಗುವಾಹಟಿಯಲ್ಲಿ ಸಭೆಗಳನ್ನು ನಡೆಸುವುದನ್ನು ಅಸ್ಸಾಂ ಪೊಲೀಸರು ನಿಷೇಧಿಸಿದ್ದಾರೆ.

ತೊಗಡಿಯಾರ ಪ್ರಚೋದನಕಾರಿ ಭಾಷಣಗಳು ರಾಜ್ಯದಲ್ಲಿಯ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡಬಹುದು ಎಂದು ಪೊಲೀಸರು ಹೇಳಿದ್ದಾರೆ.

ಈ ವರ್ಷದ ಎಪ್ರಿಲ್‌ನಲ್ಲಿ ವಿಹಿಂಪನ್ನು ತೊರೆದಿರುವ ತೊಗಡಿಯಾ ಅವರು ಇಂದು ಜಿಲ್ಲೆಗೆ ಆಗಮಿಸಲಿದ್ದರು.ಮುಂದಿನ ಎರಡು ದಿನಗಳಲ್ಲಿ ಎಎಚ್‌ಪಿ ಸಭೆಗಳನ್ನು ಮತ್ತು ಸುದ್ದಿಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಲಿದ್ದರು. ಗುವಾಹಟಿ ಪೊಲೀಸ್ ಆಯುಕ್ತ ಹಿರೇನ್ ನಾಥ್ ಅವರು ಹೊರಡಿಸಿರುವ ಆದೇಶವು ಮುಂದಿನ ಎರಡು ತಿಂಗಳು ಜಾರಿಯಲ್ಲಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News