ಬಿಜೆಪಿ ತೊರೆದ ಅಡ್ವಾಣಿ ಆಪ್ತ, ಮಾಜಿ ಸಂಸದ ಚಂದನ್ ಮಿತ್ರಾ

Update: 2018-07-18 14:27 GMT

ಹೊಸದಿಲ್ಲಿ, ಜು.18: ಹಿರಿಯ ಬಿಜೆಪಿ ನಾಯಕ ಚಂದನ್ ಮಿತ್ರಾ ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದೇನೆ. ಯಾವಾಗ ಮತ್ತು ಎಲ್ಲಿ ಸೇರ್ಪಡೆಗೊಳ್ಳಬೇಕೆಂದು ನಾನು ಈವರೆಗೂ ನಿರ್ಧರಿಸಿಲ್ಲ. ನಾನು ಈ ಬಗ್ಗೆ ಹೇಳಿಕೆ ನೀಡುವುದಿಲ್ಲ" ಎಂದಿದ್ದಾರೆ.

ಮಾಜಿ ರಾಜ್ಯಸಭಾ ಸದಸ್ಯರಾಗಿರುವ ಮಿತ್ರಾ ಪಯನೀರ್ ನ ಸಂಪಾದಕರು ಹಾಗು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News