ಮಧ್ಯಪ್ರದೇಶ: ಏಕಾಂಗಿಯಾಗಿ ಸ್ಪರ್ಧಿಸಲು ಎಸ್‌ಪಿ ನಿರ್ಧಾರ

Update: 2018-07-18 15:24 GMT

ಲಕ್ನೋ,ಜು.18: ಪ್ರತಿಪಕ್ಷಗಳ ನಡುವೆ,ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ನಡುವೆ ಚುನಾವಣಾ ಮೈತ್ರಿಯ ಕುರಿತು ಮಾತುಕತೆಗಳು ಉತ್ತುಂಗದಲ್ಲಿವೆಯಾದರೂ ಮಧ್ಯಪ್ರದೇಶ ಸೇರಿದಂತೆ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿರುವ ಇತರ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಳ್ಳುವಲ್ಲಿ ಎಸ್‌ಪಿ ಹೆಚ್ಚಿನ ಪ್ರಗತಿಯನ್ನು ಕಂಡಿಲ್ಲ. ಹೀಗಾಗಿ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಎಲ್ಲ ವಿಧಾನಸಭಾ ಸ್ಥಾನಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಲು ಅದು ನಿರ್ಧರಿಸಿದೆ.

ನಾಯಕತ್ವವು ಇತರ ರಾಜ್ಯಗಳಲ್ಲಿಯೂ ಪಕ್ಷದ ಬುನಾದಿಯನ್ನು ವಿಸ್ತರಿಸುತ್ತಿರುವುದರಿಂದ ರಾಜಸ್ಥಾನ ಮತ್ತು ಛತ್ತೀಸ್‌ಗಡ ಚುನಾವಣೆಗಳಲ್ಲಿಯೂ ಎಸ್‌ಪಿ ಕಣಕ್ಕಿಳಿಯಲಿದೆ ಎಂದು ಪಕ್ಷದ ಹಿರಿಯ ನಾಯಕರೋರ್ವರು ತಿಳಿಸಿದರು.

ಮಧ್ಯಪ್ರದೇಶದಲ್ಲಿ ಚುನಾವಣಾ ಮೈತ್ರಿಗಾಗಿ ಕಾಂಗ್ರೆಸ್ ಮತ್ತು ಬಿಎಸ್‌ಪಿ ನಡುವೆ ಮಾತುಕತೆಗಳು ನಡೆಯುತ್ತಿದ್ದು,ಉಭಯ ಪಕ್ಷಗಳು ಎಸ್‌ಪಿಯನ್ನು ದೂರವಿರಿಸಿವೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ-ಎಸ್‌ಪಿ ಮೈತ್ರಿಯು ಸಾಲು ಸಾಲು ಉಪಚುನಾವಣೆಗಳಲ್ಲಿ ಬಿಜೆಪಿಗೆ ಸೋಲು ಉಣ್ಣಿಸಿದೆಯಾದರೂ ಬಿಎಸ್‌ಪಿಯು ಮಧ್ಯಪ್ರದೇಶದಲ್ಲಿ ಮುಖ್ಯ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಜೊತೆ ಮೈತ್ರಿಗೆ ಒಲವು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News