ಬಂಗಾಳ ಕೊಲ್ಲಿಯಲ್ಲಿ ಬೋಟ್ ಮುಳುಗಡೆ: ಎರಡು ದಿನ ಕಳೆದರೂ ಪತ್ತೆಯಾಗದ ಬೆಸ್ತರು

Update: 2018-07-18 16:42 GMT

ಡೈಮಂಡ್ ಹಾರ್ಬರ್, ಜು.18: ಸೋಮವಾರಂದು ಬಂಗಾಳ ಕೊಲ್ಲಿಯಲ್ಲಿ ಮೂರು ದೋಣಿಗಳು ಪಲ್ಟಿಯಾಗಿ ಮುಳುಗಿದ್ದು ಅವುಗಳಲ್ಲಿದ್ದ ಹತ್ತೊಂಬತ್ತು ಮಂದಿ ಬೆಸ್ತರು ಎರಡು ದಿನಗಳು ಕಳೆದರೂ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಓರ್ವ ಬೆಸ್ತನ ಮೃತದೇಹ ದ್ವೀಪವೊಂದರ ಸಮೀಪ ಪತ್ತೆಯಾಗಿದೆ ಎಂದು ಬೆಸ್ತರ ಸಂಘಟನೆ ಹೇಳಿಕೊಂಡಿದೆ. ಎಫ್‌ಬಿ ಜಾಯ್ ಕಿಶನ್ ಹೆಸರಿನ ದೋಣಿಯಲ್ಲಿದ್ದ ಓರ್ವ ಮೀನುಗಾರನ ಮೃತದೇಹ ಡಾಲ್‌ಹೌಸಿ ದ್ವೀಪದಿಂದ ಸುಮಾರು 30 ಕಿ.ಮೀ. ದೂರದಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ ಎಂದು ಕಕ್‌ದ್ವೀಪದಲ್ಲಿರುವ ಪಶ್ಚಿಮ ಬಂಗಾಳ ಮೀನುಗಾರರ ಸಂಘಟನೆ ತಿಳಿಸಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾದ ಬೆಸ್ತರ ಪತ್ತೆಗಾಗಿ ಕೋಸ್ಟ್ ಗಾರ್ಡ್‌ನ ಹೆಲಿಕಾಪ್ಟರನ್ನು ನಿಯೋಜಿಸಲಾಗಿದೆ. ಪೊಲೀಸರು ಹಾಗೂ ಬೆಸ್ತರು ಕೂಡಾ ನಾಪತ್ತೆಯಾದವರ ಪತ್ತೆಗಾಗಿ ಹಲವು ಬೋಟ್‌ಗಳಲ್ಲಿ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದಂದು ದಕ್ಷಿಣ ಬಂಗಾಳದ ಸುಂದರ್‌ಬನ್ ಪ್ರದೇಶದಲ್ಲಿರುವ ಫ್ರೇಝರ್‌ಗಂಜ್ ಸಮೀಪ ಬಂಗಾಳ ಕೊಲ್ಲಿಯಲ್ಲಿ ಮೂರು ದೋಣಿಗಳು ಪಲ್ಟಿಯಾ ಪರಿಣಾಮ ಹತ್ತೊಂಬತ್ತು ಮೀನುಗಾರರು ಸಮುದ್ರ ಮಧ್ಯೆ ನಾಪತ್ತೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News