×
Ad

ಫ್ರಾನ್ಸ್ ಫುಟ್ಬಾಲ್ ಆಟಗಾರ ಪೋಗ್ಬಾರ 'ಅಚ್ಛೇ ದಿನ್' ಹುಡುಕಾಟ!

Update: 2018-07-18 22:38 IST

ಹೊಸದಿಲ್ಲಿ, ಜು.18: ಪ್ರಧಾನಿ ನರೇಂದ್ರ ಮೋದಿಯವರ 'ಅಚ್ಛೇ ದಿನ್' ಘೋಷಣೆಯನ್ನು ಟೀಕಿಸುವ ಸಲುವಾಗಿ ಕಾಂಗ್ರೆಸ್ ಈ ಬಾರಿ ಫ್ರಾನ್ಸ್ ಫುಟ್ಬಾಲ್ ಆಟಗಾರ ಪೌಲ್ ಪೋಗ್ಬಾರ ವಿಡಿಯೋವೊಂದನ್ನು ಬಳಸಿದೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಫಿಫಾ ವಿಶ್ವಕಪ್ ನಲ್ಲಿ ಚಾಂಪಿಯನ್ ಆದ ಫ್ರಾನ್ಸ್ ತಂಡದ ಆಟಗಾರ ಪೋಗ್ಬಾ ಮೈದಾನದಲ್ಲಿ ಯಾರನ್ನೋ ಹುಡುಕುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಇದಕ್ಕೆ ಕಾರಣ ಪೋಗ್ಬಾ ವಿಚಿತ್ರವಾಗಿ ಹುಡುಕಾಟ ನಡೆಸಿದ್ದು. ಇದೇ ವಿಡಿಯೋವನ್ನು ಕಾಂಗ್ರೆಸ್ ಪ್ರಧಾನಿಯ ಕಾಲೆಳೆಯಲು ಬಳಸಿಕೊಂಡಿದೆ,

"ಯಾರಾದರೊಬ್ಬರು ಅಚ್ಛೇ ದಿನ್ ಎಂದಾಗ, ಪೋಗ್ಬಾ ಹಾಗು ನಮಗೆ ಹೀಗೆಯೇ ಅನಿಸುತ್ತದೆ" ಎಂದು ಬರೆದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಇಷ್ಟೇ ಅಲ್ಲದೆ ಈ ಟ್ವೀಟ್ ಗೆ ಕಾಂಗ್ರೆಸ್ ಪೋಗ್ಬಾರನ್ನು ಟ್ಯಾಗ್ ಮಾಡಿದೆ. ಸದ್ಯ ಪೋಗ್ಬಾ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News