ರಾಜಸ್ಥಾನದಲ್ಲಿ ಸರಕಾರಿ ನೌಕರರಿಗೆ ಎರಡು ಮಕ್ಕಳ ನೀತಿಯಲ್ಲಿ ಸಡಿಲಿಕೆ
Update: 2018-07-19 20:48 IST
ಜೈಪುರ,ಜು.19: ಮೂರನೇ ಮಗುವಾದರೆ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸುವ ನಿಬಂಧನೆಯನ್ನು ರದ್ದುಗೊಳಿಸುವ ಮೂಲಕ ರಾಜಸ್ಥಾನ ಸರಕಾರವು ತನ್ನ ಉದ್ಯೋಗಿಗಳಿಗೆ ವಿಧಿಸಲಾಗಿದ್ದ ಎರಡು ಮಕ್ಕಳ ನೀತಿಯನ್ನು ಸಡಿಲಿಸಿದೆ.
ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ಸಂಸದೀಯ ವ್ಯವಹಾರಗಳ ಸಚಿವ ರಾಜೇಂದ್ರ ರಾಥೋಡ್ ಅವರು ತಿಳಿಸಿದರು.
ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ಯಶಸ್ವಿಯಾಗಿಸಲು ರಾಜ್ಯ ಸರಕಾರವು ಎಲ್ಲ ಪ್ರಯತ್ನಗಳನ್ನು ಮಾಡಿದೆ. ಕಳೆದೆರಡು ವರ್ಷಗಳಲ್ಲಿ ರಾಜ್ಯದಲ್ಲಿ ಜನನ ದರದಲ್ಲಿ ಗಣನೀಯ ಸುಧಾರಣೆಯಾಗಿದೆ ಎಂದೂ ಅವರು ಹೇಳಿದರು.