40 ಮಂದಿಯಿಂದ 4 ದಿನಗಳ ಕಾಲ ಮಹಿಳೆಯ ಅತ್ಯಾಚಾರ: ಆರೋಪ
Update: 2018-07-20 20:12 IST
ಚಂಡಿಗಢ, ಜು. 19: ಉದ್ಯೋಗ ಒದಗಿಸುವ ಭರವಸೆ ನೀಡಿ ತನ್ನನ್ನು ಗೆಸ್ಟ್‌ಹೌಸ್ ಒಂದರಲ್ಲಿ ಒತ್ತೆ ಸೆರೆ ಇರಿಸಿ 40 ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ತನ್ನನ್ನು ಮೋರ್ನಿ ಹಿಲ್‌ನಲ್ಲಿರುವ ಗೆಸ್ಟ್ ಹೌಸ್‌ನಲ್ಲಿ ಜುಲೈ 15ರಿಂದ 18ರ ವರೆಗೆ ಒತ್ತೆ ಸೆರೆ ಇರಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಚಂಡಿಗಢ ಪೊಲೀಸ್ ಠಾಣೆಯಲ್ಲಿ ಗುರುವಾರ ದಾಖಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಗಳಲ್ಲಿ ಓರ್ವನ ಪರಿಚಯ ತನ್ನ ಪತಿಗೆ ಇದೆ. ಅವರು ಗೆಸ್ಟ್ ಹೌಸ್‌ನಲ್ಲಿ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಗೆಸ್ಟ್‌ಹೌಸ್‌ನ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗದೆ ಎಂದು ಪೊಲೀಸ್ ಠಾಣೆಯ ಅಧಿಕಾರಿ ರಂಜಿತ್ ಸಿಂಗ್ ತಿಳಿಸಿದ್ದಾರೆ.