ಮೋದಿಯ ಮಾತುಗಳು ಅವರ ನಿರಾಶೆಯನ್ನು ಪ್ರದರ್ಶಿಸುತ್ತದೆ: ಸೋನಿಯಾ ಗಾಂಧಿ

Update: 2018-07-22 14:24 GMT

ಹೊಸದಿಲ್ಲಿ, ಜು. 22: ನೂತನವಾಗಿ ರೂಪಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ರವಿವಾರದ ಮೊದಲ ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಟುವಾಗಿ ಟೀಕಿಸಿದರು.

 ಮೋದಿ ಅವರ ವಾಕ್ಚಾತುರ್ಯ ಅವರ ನಿರಾಶೆಯನ್ನು ಪ್ರದರ್ಶಿಸುತ್ತದೆ. ಮೋದಿ ಸರಕಾರದ ಪ್ರತಿಲೋಮ ಎಣಿಕೆ ಆರಂಭವಾಗಿದೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದರು. ‘ನಿರಂತರ ಸ್ವಪ್ರಸಂಶೆ’ ಹಾಗೂ ‘ಜುಮ್ಲಾ’ ನೀತಿ ನಿರೂಪಣೆಗೆ ಬದಲಿಯಾಗಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು.

 ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಮೊದಲ ಬಾರಿಗೆ ಮಾತನಾಡಿದ ಸೋನಿಯಾ ಗಾಂಧಿ, ಭಾರತದ ಪ್ರಜಾಪ್ರಭುತ್ವದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಪಾಯಕಾರಿ ಆಡಳಿತದಿಂದ ಜನರನ್ನು ನಾವು ರಕ್ಷಿಸಬೇಕು ಎಂದರು. ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ ಅವರು, ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾವು ಬದ್ದರಾಗಿದ್ದೇವೆ. ಈ ಪ್ರಯತ್ನದಲ್ಲಿ ನಾವೆಲ್ಲರೂ ರಾಹುಲ್ ಗಾಂಧಿ ಅವರಿಗೆ ಬೆಂಬಲಿಸಲಿದ್ದೇವೆ ಎಂದರು. ಭಾರತದ ಸಾಮಾಜಿಕ ಸೌಹಾರ್ದ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಮರು ಸ್ಥಾಪಿಸುವ ಪಕ್ಷದ ಗುರಿಗೆ ನಾವು ಬೆಂಬಲಿಸಲಿದ್ದೇವೆ ಎಂದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News