ಕಾಂಗ್ರೆಸ್ ಫ್ಲೆಕ್ಸ್ ನಲ್ಲಿ ರಾಹುಲ್ - ಮೋದಿ ಚಿತ್ರ!

Update: 2018-07-22 14:41 GMT

ಹೊಸದಿಲ್ಲಿ, ಜು. 22: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಲಂಗಿಸುತ್ತಿರುವ ದೃಶ್ಯವಿರುವ ಫ್ಲೆಕ್ಸ್ ಅನ್ನು ಮುಂಬೈ ಕಾಂಗ್ರೆಸ್ ಅಂಧೇರಿಯಲ್ಲಿ ಅಳವಡಿಸಿದೆ. ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಫ್ಲೆಕ್ಸ್‌ನ ಚಿತ್ರವನ್ನು ಶೇರ್ ಮಾಡಿದ್ದಾರೆ ಹಾಗೂ ನಾವು ಪ್ರೀತಿಯ ಮೂಲಕ ವಿಜಯಿಯಾಗುತ್ತೇವೆ. ದ್ವೇಷದ ಮೂಲಕ ಅಲ್ಲ ಎಂದು ಬರೆದಿದ್ದಾರೆ.

 ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮೇಲಿನ ಚರ್ಚೆಯ ಸಂದರ್ಭ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಹಾಗೂ ಬಿಜೆಪಿಯನ್ನು ಕಟುವಾಗಿ ಟೀಕಿಸಿದ ಬಳಿಕ ಮೋದಿ ಅವರ ಬಳಿ ತೆರಳಿ ಆಲಂಗಿಸಿಕೊಂಡಿದ್ದರು. ‘‘ನೀವು ನನ್ನನ್ನು ಪಪ್ಪು ಎಂದು ಕರೆಯಿರಿ. ಹೆಸರು ಬೇಕಾದರೂ ಕೊಡಿ. ಆದರೆ, ನಾನು ನಿಮ್ಮನ್ನು ಎಂದಿಗೂ ದ್ವೇಷಿಸಲಾರೆ’’ ಎಂದು ರಾಹುಲ್ ಗಾಂಧಿ ಹೇಳಿದ್ದರು. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ವಿಫಲವಾಗಿತ್ತು. ರಾಹುಲ್ ಅವರ ನಡವಳಿಕೆಯನ್ನು ಕಾಂಗ್ರೆಸ್ ಪ್ರಶಂಸಿಸಿದರೆ, ಸ್ಪೀಕರ್ ಸುಮಿತ್ರಾ ಮಹಾಜನ್, ಇದು ಸಂಸತ್ತಿನ ಸಭ್ಯತೆಯ ವಿರುದ್ಧದ ನಾಟಕ ಎಂದಿದ್ದರು. ಗೃಹ ಸಚಿವ ರಾಜನಾಥ್ ಸಿಂಗ್ ಉತ್ತರಾಖಂಡದಲ್ಲಿ ನಡೆದ ಚಿಪ್ಕೋ ಚಳವಳಿಯನ್ನು ನೆನಪಿಸಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News