ಕರ್ನಾಟಕದ ಅಂಧ ಮತದಾರರಿಗೆ ಬ್ರೈಲ್ ಕಾರ್ಡ್ ವಿತರಣೆ: ರಾಹುಲ್ ಗಾಂಧಿ ಪ್ರಶಂಸೆ

Update: 2018-07-22 14:44 GMT

 ಹೊಸದಿಲ್ಲಿ, ಜು. 22: ಕರ್ನಾಟಕದ ಅಂಧರಿಗೆ ಬ್ರೈಲ್ ಎಪಿಕ್ ಕಾರ್ಡ್ ಪೂರೈಸುವ ಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಪ್ರಶಂಸಿಸಿದ್ದಾರೆ ಹಾಗೂ ಇಂತಹ ಕ್ರಮಗಳು ಎಲ್ಲರೂ ಮತ ಹಾಕಲು ಸಾಧ್ಯವಾಗುವಂತೆ ಮಾಡುತ್ತದೆ ಎಂದಿದ್ದಾರೆ.

 ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅವರಿಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ, ಅಂಗವಿಕಲ ವ್ಯಕ್ತಿಗಳು ಕೂಡ ಮತ ಹಾಕುವಂತೆ ಆಯೋಗ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬಹುದು ಎಂದು ನಿರೀಕ್ಷಿಸುತ್ತೇನೆ. ಈ ಉಪಕ್ರಮವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದಿದ್ದಾರೆ. ‘‘ಕರ್ನಾಟಕದಲ್ಲಿ ಚುನಾವಣಾ ಆಯೋಗದ ಅದ್ಭುತ ಉಪಕ್ರಮಗಳ ಬಗ್ಗೆ ಪ್ರಶಂಸಿಸಲು ಈ ಪತ್ರ ಬರೆಯುತ್ತಿದ್ದೇನೆ. ಅಂಧ ಮತದಾರರಿಗೆ ಬ್ರೈಲ್ ಎಪಿಕ್ ಕಾರ್ಡ್ ಒದಗಿಸಿರುವುದು ಸರಿಯಾದ ದಾರಿಯ ಒಂದು ಉತ್ತಮ ಹೆಜ್ಜೆ. ಇದರಿಂದ ಎಲ್ಲ ಮತದಾರರು ಚುನಾವಣೆ ಹಾಗೂ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ’’ ಎಂದು ಅವರು ಹೇಳಿದ್ದಾರೆ. ಅಂಗವಿಕಲರು ಮತದಾನದಲ್ಲಿ ಪಾಲ್ಗೊಳ್ಳಲು ಇನ್ನಷ್ಟು ಕ್ರಮಗಳನ್ನು ಚುನಾವಣಾ ಆಯೋಗ ತೆಗೆದುಕೊಳ್ಳಬಹುದು ಎಂದು ನಾನು ನಿರೀಕ್ಷಿಸುತ್ತೇನೆ. ಕಾಂಗ್ರೆಸ್ ಇದಕ್ಕೆ ಮುಕ್ತ ಮನಸ್ಸಿನ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News