3ನೇ ಹಾಕಿ ಟೆಸ್ಟ್: ಕಿವೀಸ್ ವಿರುದ್ಧ ಭಾರತಕ್ಕೆ 4-0 ಜಯ ; ಸರಣಿ ಕೈವಶ

Update: 2018-07-22 16:29 GMT

ಬೆಂಗಳೂರು, ಜು.22: ಭಾರತದ ಪುರುಷರ ಹಾಕಿ ತಂಡ ಇಲ್ಲಿ ನಡೆದ 3ನೇ ಹಾಗೂ ಅಂತಿಮ ಹಾಕಿ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತದ ಪುರುಷರ ಹಾಕಿ ತಂಡ 4-0 ಜಯ ಗಳಿಸಿದೆ.

ರುಪೇಂದರ್ ಪಾಲ್ ಸಿಂಗ್(8ನೇ ನಿಮಿಷ), ಸುರೇಂರ್ ಕುಮಾರ್(15ನೇ ನಿಮಿಷ), ಮನ್‌ದೀಪ್ ಸಿಂಗ್(44ನೇ ನಿಮಿಷ) ಮತ್ತು ಆಕಾಶ್‌ದೀಪ್ ಸಿಂಗ್(60ನೇ ನಿಮಿಷ) ಗೋಲು ದಾಖಲಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News