ಸುನೀಲ್ ಛೆಟ್ರಿಗೆ ಎಐಎಫ್‌ಎಫ್ ವರ್ಷದ ಆಟಗಾರ ಪ್ರಶಸ್ತಿ

Update: 2018-07-22 16:12 GMT

 ಮುಂಬೈ, ಜು.22: ಭಾರತದ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ 2017ನೇ ಸಾಲಿನ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಪ್ರಶಸ್ತಿಗೆ ಭಾಜನರಾಗಿದ್ದಾರೆ.

 ಭಾರತ ಮತ್ತು ಬೆಂಗಳೂರು ಎಫ್‌ಸಿ ತಂಡದ ಸ್ಟಾರ್ ಸ್ಟ್ರೈಕರ್ ಆಗಿರುವ ಸುನೀಲ್ ಛೆಟ್ರಿ ಅವರು ಬೈಚುಂಗ್ ಭುಟಿಯಾ ಬಳಿಕ 100 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ ಭಾರತದ ಎರಡನೇ ಆಟಗಾರ.

ಎಐಎಫ್‌ಎಫ್ ವರ್ಷದ ಆಟಗಾರ್ತಿ ಪ್ರಶಸ್ತಿಯನ್ನು ಕಮಲಾದೇವಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News