ಪಿಡಿಪಿ ಉಪಾಧ್ಯಕ್ಷ ಸ್ಥಾನಕ್ಕೆ ಮೆಹಬೂಬ ಸೋದರಮಾವ ಮದನಿ ರಾಜೀನಾಮೆ
Update: 2018-07-23 22:25 IST
ಶ್ರೀನಗರ,ಜು.23: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಸೋದರಮಾವ ಸರ್ತಾಜ್ ಮದನಿ ಅವರು ಸೋಮವಾರ ಪಿಡಿಪಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ಹಿತಾಸಕ್ತಿಯ ದೃಷ್ಟಿಯಿಂದ ತಾನು ಹುದ್ದೆಯಿಂದ ಕೆಳಗಿಳಿಯುತ್ತಿದ್ದು,ತನ್ನ ರಾಜೀನಾಮೆಯನ್ನು ಈಗಾಗಲೇ ಪಕ್ಷಾಧ್ಯಕ್ಷೆ ಮೆಹಬೂಬ ಅವರಿಗೆ ಸಲ್ಲಿಸಿರುವುದಾಗಿ ತಿಳಿಸಿದರು.
ಮದನಿ ಅವರು 2014ರ ವಿಧಾನಸಭಾ ಚುನಾವಣೆಯಲ್ಲಿ ಕುಲ್ಗಾಮ್ ಜಿಲ್ಲೆಯ ದೇವಸರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನಪ್ಪಿದ್ದರು.
ಮದನಿ ಮತ್ತು ಇತರ ನಾಯಕರ ವಿರುದ್ಧ ಇತ್ತೀಚಿಗೆ ತೀವ್ರ ದಾಳಿಯನ್ನು ನಡೆಸಿದ್ದ ಪಕ್ಷದಲ್ಲಿನ ಭಿನ್ನಮತೀಯರು,ನಿಕಟ ಸಂಬಂಧಿಗಳ ಕೂಟವು ಪಿಡಿಪಿಯನ್ನು ಇಂದಿನ ಬಿಕ್ಕಟ್ಟಿನ ಸ್ಥಿತಿಗೆ ತಂದಿದೆ ಮತ್ತು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿದ್ದರು.